ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಗೆ ಆಟೋಟ ಪೂರಕ; ಅಂದಾನಗೌಡ ಪಾಟೀಲ್

SCHOOL SPORTS
ಯಲಬುರ್ಗಾ ತಾಲೂಕಿನ ತುಮ್ಮರಗುದ್ದಿಯಲ್ಲಿ ಆಯೋಜಿಸಿದ್ದ ಬಂಡಿ-ವಜ್ರಬಂಡಿ-ಚಿಕ್ಕಮ್ಯಾಗೇರಿ ಅಂತರ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಗ್ರಾಪಂ ಅಧ್ಯಕ್ಷೆ ಹೊಳಿಯಮ್ಮ ಫಕೀರಪ್ಪ ಪಾಟೀಲ್, ಎಸ್ಡಿಎಂಸಿ ಅಧ್ಯಕ್ಷ ಚಂದಾಲಿಂಗ ಹಿರೇಮನಿ, ತಾಪಂ ಕೆಡಿಪಿ ಮಾಜಿ ಸದಸ್ಯ ಅಂದಾನಗೌಡ ಬಳೂಟಗಿ, ಜಿಪಂ ಮಾಜಿ ಸದಸ್ಯ ಈರಪ್ಪ ಕುಡಗುಂಟಿ ಇದ್ದರು.
Published on

ಯಲಬುರ್ಗಾ: ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಾಪಂ ಕೆಡಿಪಿ ಮಾಜಿ ಸದಸ್ಯ ಅಂದಾನಗೌಡ ಪಾಟೀಲ್ ಬಳೂಟಗಿ ಹೇಳಿದರು.

ತಾಲೂಕಿನ ತುಮ್ಮರಗುದ್ದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಂಡಿ-ವಜ್ರಬಂಡಿ- ಚಿಕ್ಕಮ್ಯಾಗೇರಿ ಅಂತರ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಶಾಲಾ ಹಂತದಲ್ಲಿ ಮಕ್ಕಳು ಕ್ರೀಡೆಗೆ ಹೆಚ್ಚು ಆದ್ಯತೆ ನೀಡಬೇಕು. ಆಟದಲ್ಲಿ ಸೋಲು-ಗೆಲುವನ್ನು ಲೆಕ್ಕಿಸದೇ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಪಂ ಮಾಜಿ ಸದಸ್ಯ ಈರಪ್ಪ ಕುಡಗುಂಟಿ ಮಾತನಾಡಿ, ಪ್ರತಿಭೆ ಮತ್ತು ಸಾಮರ್ಥ್ಯ ತಿಳಿಯಲು ಕ್ರೀಡೆ ಸಹಕಾರಿ. ಕ್ರೀಡೆಯಲ್ಲಿ ಸೌಹಾರ್ದತೆ ಅಡಗಿದೆ ಎಂದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಫ್.ಎಂ.ಕಳ್ಳಿ ಮಾತನಾಡಿದರು.

ಗ್ರಾಪಂ ಅಧ್ಯಕ್ಷೆ ಹೊಳಿಯಮ್ಮ ಫಕೀರಪ್ಪ ಪಾಟೀಲ್, ಎಸ್ಡಿಎಂಸಿ ಅಧ್ಯಕ್ಷ ಚಂದಾಲಿಂಗ ಹಿರೇಮನಿ, ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ವೀರೇಶ ಅಂಗಡಿ, ಮುಖ್ಯಶಿಕ್ಷಕ ಹುಚ್ಚೀರಪ್ಪ ಬೇಟಗೇರಿ, ಪಿಡಿಒ ಸೋಮಪ್ಪ ಪೂಜಾರ, ಮುಖಂಡರಾದ ಈಶ್ವರ ಅಟಮಾಳಗಿ, ಶೇಷಗಿರಿರಾವ್ ಕುಲಕರ್ಣಿ, ಕಳಕನಗೌಡ ಪಾಟೀಲ್, ಶಂಕ್ರಪ್ಪ ಬಡಿಗೇರ್, ನಿಂಗಪ್ಪ ಈಳಿಗೇರ್, ದೇವಪ್ಪ ಪರಂಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net