

ಗಂಗಾವತಿ: ಶಿಕ್ಷಕರ ನೇಮಕ ಮತ್ತು ಶಿಷ್ಯ ವೇತನ ವಿತರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಸ್‌ಎ್ಐ ತಾಲೂಕು ಸಮಿತಿ ಸದಸ್ಯರು ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಯು.ನಾಗರಾಜ್‌ಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಮಗುವಿಗೆ ಜನ್ಮ ನೀಡಿದ 9ನೇ ತರಗತಿ ವಿದ್ಯಾರ್ಥಿನಿ
ಸಮಿತಿ ರಾಜ್ಯಾಧ್ಯಕ್ಷ ಎನ್.ಶಿವಪ್ಪ ಮಾತನಾಡಿ, ಶಿಕ್ಷಣ ಕ್ಷೇತ್ರ ನಿರ್ಲಕ್ಷಿಸಿದ ಪರಿಣಾಮ ಕಲ್ಯಾಣ ಕರ್ನಾಟಕ ಭಾಗ ಎಲ್ಲದರಲ್ಲೂ ಹಿಂದುಳಿದಿದ್ದು, ಸೌಲಭ್ಯ ಮರೀಚಿಕೆಯಾಗಿದೆ. ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಹೆಚ್ಚುತ್ತಿದ್ದು, ಗ್ರಾಮೀಣ ಭಾಗದಿಂದ ಶಿಕ್ಷಣ ಕಲಿಯಲು ಬರುವ ವಿದ್ಯಾರ್ಥಿಗಳಿಗೆ ಬಸ್ ಸಂಚಾರದ ವ್ಯವಸ್ಥೆಯಿಲ್ಲ.
ಶಿಕ್ಷಕರ ಕೊರತೆ ಹೆಚ್ಚುತ್ತಿದ್ದು, ಪ್ರಾದೇಶಿಕ ಅಸಮಾನತೆ ಮಿತಿ ಮೀರಿದೆ. ಕಲ್ಯಾಣ ಕರ್ನಾಟಕ ಭಾಗದ ಜನಪ್ರತಿನಿಧಿಗಳು ಶಿಕ್ಷಣ ಕ್ಷೇತ್ರ ಕಡೆಗಣಿಸಿದ್ದು, ಸೌಲಭ್ಯಕ್ಕಾಗಿ ಸರ್ಕಾರಕ್ಕೆ ಒತ್ತಾಯಿಸುತ್ತಿಲ್ಲ. ವಿದ್ಯಾರ್ಥಿನಿಯರಿಗೆ ಭದ್ರತೆ, ಶಿಕ್ಷಕರ ನೇಮಕ, ಮೂಲ ಸೌಕರ್ಯ, ಶಿಷ್ಯ ವೇತನ ಸೇರಿ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿದರು.
ರಾಜ್ಯ ಉಪಾಧ್ಯಕ್ಷ ಡಾ.ದೊಡ್ಡಬಸವರಾಜ್, ಸಮಿತಿ ತಾಲೂಕಾಧ್ಯಕ್ಷ ಯು.ನಾಗರಾಜ್, ಪದಾಧಿಕಾರಿಗಳಾದ ಬಾಲಾಜಿ, ಶರ್ೀ, ಶರಣ ಬಸವ, ನಾಗರಾಜ್, ಬಸಯ್ಯ, ದರ್ಶನ್ ಅಂಕಿತಾ, ಐಶ್ವರ್ಯ, ಪವಿತ್ರಾ, ಸುಷ್ಮಾ, ಭುವನೇಶ್ವರಿ, ದುರುಗಮ್ಮ, ಅಮತಾ ಕೆ.ಅನು ಇತರರಿದ್ದರು.