ಜಿಎಂಐಟಿಯಲ್ಲಿ ವಿದ್ಯಾರ್ಥಿಗಳ ಸಡಗರ

dvg gmit july 17-2
Published on

ದಾವಣಗೆರೆ: ಕ್ಯಾಂಪಸ್ ಸಂದರ್ಶನದಲ್ಲಿ ಉದ್ಯೋಗಾವಕಾಶ ಪಡೆದ ಜಿಎಂಐಟಿ ಕಾಲೇಜಿನ ವಿದ್ಯಾರ್ಥಿಗಳಿಂದ ಶನಿವಾರ ಕಾಲೇಜು ಸಭಾಂಗಣದಲ್ಲಿ ಸಂಭ್ರಮ ಆಚರಣೆ ನಡೆಯಿತು.

ಪುಣೆ ಮೂಲದ ಗ್ಲೋಬಲ್ ಟ್ಯಾಲೆಂಟ್ ಟ್ರ್ಯಾಕ್ ಫೌಂಡೇಶನ್ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಶೈಕ್ಷಣಿಕ ವರ್ಷದಲ್ಲಿ 783 ವಿದ್ಯಾರ್ಥಿಗಳು ವಿವಿಧ ಕಂಪನಿಗಳಿಗೆ ಆಯ್ಕೆಯಾಗಿದ್ದು, ಮೊದಲ ಬಾರಿಗೆ ಜಿಎಂಐಟಿ ಸಂಸ್ಥೆಯು ಜಿಟಿಟಿ ಎಫ್ ಸಂಸ್ಥೆ ಸಹಯೋಗದಲ್ಲಿ, ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಶಂಸಾ ಪ್ರಮಾಣಪತ್ರ, ಉಡುಗೊರೆಯೊಂದಿಗೆ ಗೌರವಿಸಲಾಯಿತು.

ಜಿಟಿಟಿಎಫ್ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ರಾಹುಲ್ ಪವರ್, ನಿರ್ದೇಶಕ ಅಮಿತ್ ಭೋಸಲೆ, ಯುನಿವರ್ಸಿಟಿ ಅಲ್ಲಿಯನ್ಸ್‌ನ ವ್ಯವಸ್ಥಾಪಕ ನವನೀತ್‌ಕುಮಾರ್, ಕಾಲೇಜಿನ ಪ್ರಾಂಶುಪಾಲ ಡಾ.ವೈ. ವಿಜಯಕುಮಾರ್, ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥ ಟಿ.ಆರ್.ತೇಜಸ್ವಿ ಕಟ್ಟಿಮನಿ ಇದ್ದರು.

ಅತ್ಯುತ್ತಮ ಮೂವರು ವಿದ್ಯಾರ್ಥಿಗಳು ಹಾಗೂ ಅವರ ಪಾಲಕರನ್ನು ಸನ್ಮಾನಿಸಲಾಯಿತು. ಸುಚಿತ್ರಾ ಹಿರೇಗೌಡರ್, ಪೂಜಾ ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕ ಅಮಿತ್ ಶೇಖರ್ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net