ವಿದ್ಯಾರ್ಥಿಗಳು ವ್ಯಾವಹಾರಿಕ ಜ್ಞಾನ ಬೆಳೆಸಿಕೊಳ್ಳಲಿ

FEB 26-HRP-01,
ಹರಪನಹಳ್ಳಿ ತಾಲೂಕಿನ ಬಾಗಳಿ ಗ್ರಾಮದ ನಂದಿಬೇವೂರು ಗುರುಬಸಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕೋತ್ಸವ ಸಮಾರಂಭವನ್ನು ಬಿಇಒ ಎಚ್.ಲೇಪಾಕ್ಷಪ್ಪ ಉದ್ಘಾಟಿಸಿದರು. ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ನಾಗರಾಜ್, ಟಿಪಿಇಒ ಕೆ ಷಣ್ಮುಖಪ್ಪ, ಸಿಆರ್‌ಪಿ ಸಲೀಂ, ಮುಖ್ಯಶಿಕ್ಷಕಿ ಜೆ.ಎಚ್.ರೂಪಾವತಿ ಇತರರಿದ್ದರು.
Published on

ಹರಪನಹಳ್ಳಿ: ವಿದ್ಯಾರ್ಥಿಗಳು ಶಿಸ್ತು, ಸಂಯಮ, ಸಂಸ್ಕಾರ ಹಾಗೂ ಮೌಲ್ಯಗಳನ್ನು ರೂಢಿಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬೇಕು ಎಂದು ಬಿಇಒ ಎಚ್.ಲೇಪಾಕ್ಷಪ್ಪ ತಿಳಿಸಿದರು.

ಬಾಗಳಿ ಗ್ರಾಮದ ನಂದಿಬೇವೂರು ಗುರುಬಸಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಬುಧವಾರ ಮಾತನಾಡಿದರು. ವಿದ್ಯಾರ್ಥಿಗಳು ವ್ಯಾವಹಾರಿಕ ಜ್ಞಾನ ಬೆಳೆಸಿಕೊಳ್ಳಬೇಕು. ಇಂಗ್ಲಿಷ್ ಕಲಿಕೆಗೆ ಆದ್ಯತೆ ನೀಡಬೇಕು, ಶಿಕ್ಷಕರು ಈ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಹಲವಾರು ವರ್ಷಗಳಿಂದ ಶಾಲೆಯು ಸಮಾಜಕ್ಕೆ ಉತ್ತಮ ವಿದ್ಯಾರ್ಥಿಗಳನ್ನು ನೀಡುತ್ತಿದೆ. ಈಗಾಗಲೇ ಸಹಸ್ರಾರು ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಪಡೆದು ಅತ್ಯುನ್ನತ ಸ್ಥಾನದಲ್ಲಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಸಾಕಷ್ಟು ಸೌಲಭ್ಯಗಳಿದ್ದು, ಸದ್ಬಳಕೆ ಮಾಡಿಕೊಳ್ಳಿ. ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿದರೆ ಸಾಲದು, ಕೌಶಲಗಳನ್ನು ಅರಿತು ಆತ್ಮವಿಶ್ವಾಸ ಬೆಳಸಿಕೊಂಡಲ್ಲಿ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.

ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಕೆ.ಭರಮನಗೌಡ ಮಾತನಾಡಿ, ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಾಲೆಗಳ ಹೊಣೆಗಾರಿಕೆ ಮುಖ್ಯ. ಮಕ್ಕಳು ಸಾಮಾನ್ಯವಾಗಿ ಪಾಲಕರನ್ನು ಅನುಕರಣೆ ಮಾಡುತ್ತಾರೆ. ಪಾಲಕರು ಮಕ್ಕಳಿಗಾಗಿ ಅಭ್ಯಾಸಗಳನ್ನು ಬದಲಾವಣೆ ಮಾಡಿಕೊಳ್ಳಬೇಕು ಎಂದರು. ನಾಟಿ ವೈದ್ಯ ಬಿ.ಬಿ. ಹೊಸರಪ್ಪ ಮೈಕ್‌ಸೆಟ್ ಸೌಂಡ್ ಸಿಸ್ಟಮ್ ಉಪಕರಣಗನ್ನು ಹಸ್ತಾಂತರಿಸಿದರು.

ಪ್ರಮುಖರಾದ ಎನ್.ಮಂಜುನಾಥ, ಚಿನ್ನಪ್ಪ ಮುದ್ದಜ್ಜಿ, ಸಣ್ಣಹನುಮಂತಪ್ಪ, ಚಿದಾನಂದ ಗೌಡ, ಶಿವಕುಮಾರ್ ಗೌಡ, ಬಿ.ಬಿ.ಪರುಶುರಾಮ್, ಎಚ್.ಎಂ.ಕೊಟ್ರಯ್ಯ, ಬಿ.ಬಸಮ್ಮ, ಶಿಕ್ಷಕರಾದ ಕೊಟ್ರೇಶಪ್ಪ ಬಿ, ಎ.ಅನಂತ, ಎಚ್.ಬಸವರಾಜಪ್ಪ, ಎಸ್.ಕೆ.ಅನ್ನಪೂರ್ಣ, ಎ.ಕೊಟ್ರಮ್ಮ, ಡಿ.ಶಫಿ, ಎಂ ಅಶ್ವಿನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net