ಇಲಾಖೆಯ ವಾಸ್ತವ ಸ್ಥಿತಿ ತಿಳಿಯಿರಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಹೇಳಿಕೆ

23_11_Mdy_01(Poilce Cedit)
Published on

ಮಂಡ್ಯ: ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ತೋರಿಸುವ ರೀತಿ ಪೊಲೀಸರು ಇರುವುದಿಲ್ಲ. ಬದಲಾಗಿ ಕರ್ತವ್ಯ ನಿಷ್ಠೆ ಮತ್ತು ಶಿಸ್ತಿನಿಂದ ಇರುತ್ತಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಹೇಳಿದರು.

ನಗರದ ಬಾಲಕಿಯರ ಸರ್ಕಾರಿ ಕಾಲೇಜಿನ (ಕಲ್ಲು ಕಟ್ಟಡ) ಪ್ರೌಢಶಾಲಾ ವಿಭಾಗದಲ್ಲಿ ಪೊಲೀಸ್ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಪೊಲೀಸ್ ಕೆಡಿಟ್ ಯೋಜನೆ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗೆ ಪೊಲೀಸ್ ಇಲಾಖೆಯ ವಾಸ್ತವ ಸ್ಥಿತಿ ತಿಳಿಸಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತೆಗೆದುಕೊಳ್ಳಲೇಬೇಕಾದ ಕ್ರಮಗಳ ಬಗ್ಗೆ ತಿಳಿಸಲು ಈ ಕಾರ್ಯಕ್ರಮ ಪ್ರಯೋಜನಕಾರಿಯಾಗಿದೆ. ವಿದ್ಯಾರ್ಥಿಗಳಲ್ಲಿ ಶಿಸ್ತನ್ನು ಮೂಡಿಸಲು ಹಾಗೂ ಅಪರಾಧಗಳನ್ನು ತಡೆಯಲು ಇಂತಹ ಕಾರ್ಯಕ್ರಮ ಅನುಕೂಲ ಎಂದರು.

ಡಿವೈಎಸ್ಪಿ ಶಿವಮೂರ್ತಿ, ಡಿಡಿಪಿಐ ಎಸ್.ಟಿ. ಜವರೇಗೌಡ, ಪ್ರಾಂಶುಪಾಲ ತಮ್ಮೇಗೌಡ, ಸಿಪಿಐ ಸಂತೋಷ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net