ಕವನದಿಂದ ಸಾಹಿತ್ಯಾಸಕ್ತಿ ಬೆಳಕಿಗೆ : ಪ್ರಾಧ್ಯಾಪಕ ಡಾ.ದಿವಾಕರ್ ಕೆ.ಅನಿಸಿಕೆ

Published on

ಬೆಳ್ತಂಗಡಿ: ವಿದ್ಯಾರ್ಥಿ ದೆಸೆಯಲ್ಲಿ ಕವನಗಳನ್ನು ಬರೆಯುವುದರಿಂದ ಆತ್ಮಸಂತೋಷದ ಜತೆಗೆ ಸಾಹಿತ್ಯಾಸಕ್ತಿಯನ್ನು ಗುರುತಿಸಬಹುದು. ಪಿಯುಸಿ ಹಂತದಲ್ಲಿ ವಿದ್ಯಾರ್ಥಿಗಳ ಸ್ವರಚಿತ ಕವನಗಳು ಹಾಗೂ ಅವುಗಳ ಸುಂದರವಾದ ವಾಚನ ಶೈಲಿ ಗಮನಾರ್ಹವಾದುದು. ತುಂಬ ವಿಭಿನ್ನವಾದ ವಿಷಯದಿಂದ ವಿದ್ಯಾರ್ಥಿಗಳು ಭರವಸೆ ಮೂಡಿಸಿದ್ದಾರೆ ಎಂದು ಉಜಿರೆ ಎಸ್‌ಡಿಎಂ ಕಾಲೇಜಿನ(ಸ್ವಾಯತ್ತ ) ಕನ್ನಡ ಪ್ರಾಧ್ಯಾಪಕ ಡಾ.ದಿವಾಕರ್ ಕೆ.ಹೇಳಿದರು.

ಉಜಿರೆ ಎಸ್‌ಡಿಎಂ ಪದವಿಪೂರ್ವ ಕಾಲೇಜಿನ ಕನ್ನಡ ಸಂಘ ಮತ್ತು ಗ್ರಂಥಾಲಯದ ಸಹಯೋಗದಲ್ಲಿ ನಡೆದ ವಿದ್ಯಾರ್ಥಿ ಕವಿಗೋಷ್ಠಿಯಲ್ಲಿ ಮಾತನಾಡಿದರು.

ಕಾಲೇಜಿನ ಉಪಪ್ರಾಚಾರ್ಯ ಡಾ.ರಾಜೇಶ್ ಬಿ.ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಈ ಕಾರ್ಯಕ್ರಮ ಇತರ ವಿದ್ಯಾರ್ಥಿಗಳನ್ನು ಕವನ ಬರೆಯಲು ಪ್ರೇರಣೆ ನೀಡಲಿ ಎಂದರು.

ವಿದ್ಯಾರ್ಥಿಗಳಾದ ಸುಮೇಧಾ ಗಾಂವ್ಕರ್, ಅನುಶ್ರೀ, ರಚನಾ ಕೆ., ಸನ್ನಿಧಿ ಕೆ.ಎನ್., ಶ್ರೀಪೂರ್ಣಾ ಗಬ್ಲಡ್ಕ, ಬಿಂದು, ಪ್ರಣಮ್ಯ ಜಿ., ಬಸನಗೌಡ ಹಾಗೂ ಆದಿತ್ಯ ಎಚ್.ಆರ್.ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು. ಕನ್ನಡ ಸಂಘದ ಅಧ್ಯಕ್ಷ ವಿದ್ಯಾರ್ಥಿ ಸಂಕೇತ್ ಅತಿಥಿಗಳನ್ನು ಪರಿಚಯಿಸಿದರು.

ಕನ್ನಡ ಪ್ರಾಧ್ಯಾಪಕರಾದ ಸುಭಾಷ್ ರಾವ್ ಬೋಳೂರು ಸ್ವಾಗತಿಸಿ, ವಿಶ್ವನಾಥ್ ವಂದಿಸಿ, ಮಹಾವೀರ್ ಜೈನ್ ಸಹಕರಿಸಿ, ಗ್ರಂಥಪಾಲಕ ಮನೋಹರ್ ಶೆಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net