

ಮಡಿಕೇರಿ: ಇತ್ತೀಚೆಗೆ ದಾರವಾಡದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಪ್ರತಿಭಾಕಾರಂಜಿ ಸ್ಪರ್ಧೆಗಳಲ್ಲಿ ಸಂತ ಮೈಕಲರ ಪ್ರೌಢಶಾಲೆಯ ವಿದ್ಯಾರ್ಥಿಗಳು ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಸಾಮೂಹಿಕ ಜಾನಪದ ನೃತ್ಯ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ಮೌಲ್ಯ, ಗಾನ, ಸಂಜನಾ, ಅನುಷ್ಕ, ಶ್ರೇಯಸ್, ಹರ್ಷವರ್ಧನ್, ನೀಲ್, ಪೂವಯ್ಯ ಭಾಗವಹಿಸಿದ್ದರು. ಹಿಂದಿ ಭಾಷಣ ಸ್ಪರ್ಧೆಯಲ್ಲಿ ಸೌಮ್ಯ ಭಾಗವಹಿಸಿದ್ದರು. ಅಲ್ಲದೆ, ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಅಲೆನ್ ಥೋಮಸ್ ದ್ವಿತೀಯ ಸ್ಥಾನಗಳಿಸಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಶಿಕ್ಷಕರಾದ ಪುನೀತ್, ಶಾರದ, ಸವರಿನ್ ಡಿಸೋಜ, ಸಂಕೇತ್ ತರಬೇತಿ ನೀಡಿದ್ದಾರೆ. ಅಧಿಕಾರಿ, ಶಿಕ್ಷಕರು, ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದ ಈ ವಿದ್ಯಾರ್ಥಿಗಳನ್ನು ಸಂತ ಮೈಕಲರ ವಿದ್ಯಾಸಂಸ್ಥೆ ವತಿಯಿಂದ ಅಭಿನಂದಿಸಲಾಯಿತು.