ವಿದ್ಯಾರ್ಥಿ ಸಂಸತ್ತು ಪದಗ್ರಹಣ ಸಮಾರಂಭ

gan (7)
Published on

ಕುಂದಾಪುರ: ಕೋಟೇಶ್ವರದ ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಸಂಸತ್ ಪದಗ್ರಹಣ ಸಮಾರಂಭ ಶುಕ್ರವಾರ ಜರುಗಿತು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ರೋಟರಿ ಸೆಂಟೆನಿಯಲ್ ಗವರ್ನರ್ ಎ.ಎಸ್.ಎನ್ ಹೆಬ್ಬಾರ್ ಅವರು ನಾಯಕತ್ವ, ಹೊಣೆಗಾರಿಕೆ ಹಾಗೂ ವಿನಯತೆಯ ಮಹತ್ವ ಕುರಿತು ಮಾತನಾಡಿದರು.

ಶಾಲಾ ಜಂಟಿ ಕಾರ್ಯ ನಿರ್ವಾಹಕಿ ಅನುಪವಾ ಎಸ್.ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಯಕತ್ವ ಹಾಗೂ ಶಿಷ್ಟ ನಡವಳಿಕೆಗೆ ಪಠ್ಯೇತರ ಚಟುವಟಿಕೆಗಳ ಪಾತ್ರವನ್ನು ವಿವರಿಸಿದರು.

ವಿದ್ಯಾರ್ಥಿ ನಾಯಕನಾಗಿ ಶಶಾಂಕ್ ಯು.ಕೆ., ವಿದ್ಯಾರ್ಥಿ ನಾಯಕಿಯಾಗಿ ಅವನಿ ಸುರೇಶ್ ಮತ್ತು ಶಾಲಾ ಸಂಸತ್ ಸ್ಪೀಕರ್ ಆಗಿ ಸನ್ಮತಿ, ವಿರೋಧ ಪಕ್ಷದ ನಾಯಕರಾಗಿ ಅನ್ವೇಶ್ ಪೂಜಾರಿ ಮತ್ತು ವಿದ್ಯಾವತಿ ಆಯ್ಕೆಯಾದರು. ಶಾಲಾ ವಿದ್ಯಾರ್ಥಿಗಳ ನಾಲ್ಕು ತಂಡಗಳಾದ ರಾಮನ್, ಕಲ್ಪನಾ , ಕಲಾಂ ಮತ್ತು ಆರ್ಯಭಟದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಪ್ರಾಂಶುಪಾಲೆ ಡಾ. ರೂಪಾ ಶೆಣೈ ಉಪಸ್ಥಿತರಿದ್ದರು. ಪ್ರಿಯಾಂಕಾ ಸ್ವಾಗತಿಸಿದರು. ಸಹಶಿಕ್ಷಕಿ ಸಹನಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಸಹಶಿಕ್ಷಕಿ ಸುಮಲತಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net