ವಿದ್ಯಾರ್ಥಿ ಸಂಸತ್ ಪದಾಧಿಕಾರಿಗಳ ಪದಗ್ರಹಣ

11Huk1
Published on

ಹುಕ್ಕೇರಿ: ತಾಲೂಕಿನ ರಕ್ಷಿ ಗ್ರಾಮದ ಗುಡ್ ಶೆಪರ್ಡ್ ಆಂಗ್ಲ ಮಾಧ್ಯಮ ಶಾಲೆಯ ಪ್ರಸಕ್ತ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮಗಳ ಪದಾಧಿಕಾರಿ, ವಿವಿಧ ವಿಭಾಗಗಳ ಮುಖ್ಯಸ್ಥರಿಗೆ ನೇಮ್‌ಪ್ಲೇಟ್ ಮತ್ತು ಅಧಿಕಾರ ಹಾಗೂ ಧ್ವಜ ಹಸ್ತಾಂತರ ಕಾರ್ಯಕ್ರಮ ಈಚೆಗೆ ಜರುಗಿತು.

ಶಂಗೇರಿಯ ರಾಣಿ ಚನ್ನಮ್ಮ ವಸತಿ ಶಾಲೆ ಪ್ರಾಂಶುಪಾಲ ವಿರೂಪಾಕ್ಷ ಜರಳಿ ಕಾರ್ಯಕ್ರಮ ಉದ್ಘಾಟಿಸಿದರು. ಪತ್ರಕರ್ತ ಬಾಬು ಸುಂಕದ ಶಾಲಾ ಸಂಸತ್ತಿನ ನೂತನ ಪದಾಧಿಕಾರಿಗಳಿಗೆ ಧ್ವಜ ಮತ್ತು ಅಧಿಕಾರ ಹಸ್ತಾಂತರಿಸಿದರು.

ಸಂಸ್ಥೆಯ ಪ್ರಾಚಾರ್ಯ ಡಾ.ಸದಾನಂದ ಕುರಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಹುಕ್ಕೇರಿ ರಾಣಿ ಚನ್ನಮ್ಮ ವಸತಿ ಶಾಲೆ ಪ್ರಾಚಾರ್ಯರಾಗಿದ್ದ ವಿರುಪಾಕ್ಷ ಜರಳಿ ಶಂಗೇರಿಗೆ ವರ್ಗಾವಣೆಗೊಂಡ ಪ್ರಯುಕ್ತ ಅವರನ್ನು ಸತ್ಕರಿಸಿದರು.

ಸವಿತಾ ಹೊಸೂರ, ಉತ್ಪತಜಹಾನ್ ಖಂಡಾಯತ, ಶ್ರುತಿ ಕೆ ಕೌಜಲಗಿ ಇದ್ದರು. ಸಂಸ್ಥೆಯ ಮ್ಯಾನೇಜರ್ ಬಿ.ಕಷ್ಣಪ್ಪ ಪ್ರಾರ್ಥಿಸಿದರು. ಮಧು ಬ್ಯಾಳಿ ಸ್ವಾಗತಿಸಿದರು. ರುತ್ ಸೊಪ್ಪಡ್ಲಾ ನಿರೂಪಿಸಿದರು. ಅಶ್ವಿನಿ ಬಿದರೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net