ಅವಕಾಶ ಸದ್ಬಳಕೆಯಿಂದ ಯಶಸ್ಸು : ಸೌಜನ್ಯಾ ಹೆಗ್ಡೆ ಅಭಿಪ್ರಾಯ

New Project (61)
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ವಿದ್ಯಾರ್ಥಿ ಜೀವನದಲ್ಲಿ ವಿಪುಲ ಅವಕಾಶಗಳು ಬರುತ್ತಲೇ ಇರುತ್ತವೆ. ಅವುಗಳನ್ನು ಸದ್ಭಳಕೆ ಮಾಡಿಕೊಂಡಾಗ ಯಶಸ್ಸು ಸಾಧ್ಯ ಎಂದು ಜೆಸಿಐ ರಾಷ್ಟ್ರೀಯ ತರಬೇತುದಾರೆ ಸೌಜನ್ಯಾ ಹೆಗ್ಡೆ ಅಭಿಪ್ರಾಯಪಟ್ಟರು. ಹರೇಕಳ ಶ್ರೀರಾಮಕೃಷ್ಣ ಅನುದಾನಿತ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಶಾಲಾ ಸಂಚಾಲಕ ಕಡೆಂಜ ಸೋಮಶೇಖರ್ ಚೌಟ ಅಧ್ಯಕ್ಷತೆ ವಹಿಸಿ ಸಭಾಪತಿಗೆ ಪ್ರಮಾಣ ವಚನ ಬೋಧಿಸಿದರು. ಶಾಲಾ ಮುಖ್ಯಮಂತ್ರಿ ಫಾತೀಮ ರಫೀದ, ಉಪಮುಖ್ಯಮಂತ್ರಿ ಕೃತಿಕಾ, ಸಭಾಪತಿ ಶಬರಿ, ಗೃಹಮಂತ್ರಿ ಭುವಿತ್, ಆರೋಗ್ಯಮಂತ್ರಿ ಆಯಿಷಾ ಸಫ, ಕೃಷಿಮಂತ್ರಿ ಅನುದೀಪ್ ರೈ, ಆಹಾರಮಂತ್ರಿ ಗೌತಮ್, ಕ್ರೀಡಾಮಂತ್ರಿ ಅನ್ವಿತ್, ಪ್ರವಾಸಮಂತ್ರಿ ಮಹಮ್ಮದ್ ಸವಾದ್, ವಾರ್ತಾ ಮಂತ್ರಿ ದರ್ಶಿನಿ, ಸಾಂಸ್ಕೃತಿಕ ಮಂತ್ರಿ ಮಾನ್ವಿ, ನೀರಾವರಿ ಮಂತ್ರಿ ಮೊಹಮ್ಮದ್ ತೌಫಿಕ್, ಭಿತ್ತಿಪತ್ರಿಕಾ ಮಂತ್ರಿ ಸಲ್ವ ಅವ್ವ, ಸ್ವಚ್ಛತಾ ಮಂತ್ರಿ ಆಯಿಷಾ ಸಫೀನಾ, ವಿದ್ಯಾ ಮಂತ್ರಿ ಆಯಿಷತ್ ಸ್ವಾಲಿಯ, ಸಮಯ ಪಾಲನಾ ಸಮಿತಿ ಸಂಚಾಲಕರಾಗಿ ಅನ್ಸಿಟ, ಬಿಸಿಯೂಟ ನಿರ್ವಹಣಾ ಸಮಿತಿ ದೀಕ್ಷಾ, ಶಿಸ್ತು ಪಾಲನಾ ಸಮಿತಿ ಆಯಿಷಾ ಜಸೀಲ, ಕಾರ್ಯಕ್ರಮ ನಿರ್ವಹಣಾ ಸಮಿತಿ ಆಯಿಷಾ ಫಮೀಝ, ಪ್ರಧಾನ ಕಾರ್ಯದರ್ಶಿಯಾಗಿ ಅನನ್ಯ, ವಿರೋಧ ಪಕ್ಷದ ನಾಯಕನಾಗಿ ಮಹಮ್ಮದ್ ಸಿನಾನ್ ಪ್ರಮಾಣ ವಚನ ಸ್ವೀಕರಿಸಿದರು.

ಮುಖ್ಯಶಿಕ್ಷಕಿ ಮೋಹಿನಿ ಸ್ವಾಗತಿಸಿದರು. ಶಿಕ್ಷಕ ರವಿಶಂಕರ್ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ತ್ಯಾಗಮ್ ಹರೇಕಳ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net