ವಿದ್ಯಾರ್ಥಿನಿ ಶಸ್ತ್ರ ಚಿಕಿತ್ಸೆಗೆ ಬೇಕು ಆರ್ಥಿಕ ಸಹಾಯ

healp
ಸಾಣೇಹಳ್ಳಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳಿಂದ ಆಶೀರ್ವಾದ ಪಡೆಯುತ್ತಿರುವ ಪಲ್ಲವಿ.
Published on

ಅಜ್ಜಂಪುರ: ಪಟ್ಟಣದಿಂದ ಮೂರು ಕಿಮೀ ದೂರದಲ್ಲಿರುವ ನೀರಗುಂದದ ಬಡಕುಟುಂಬದ ಪಿಯುಸಿ ವಿದ್ಯಾರ್ಥಿನಿ ಪಲ್ಲವಿ ತಲೆ ಶಸ್ತ್ರ ಚಿಕಿತ್ಸೆಗೆ ಆರ್ಥಿಕ ನೆರವು ನೀಡಬೇಕಿದೆ.

ನೀರಗುಂದದ ಕೂಲಿ ಕಾರ್ಮಿಕ ಕುಮಾರಪ್ಪ ಶಾಂತಮ್ಮ ದಂಪತಿ ಪುತ್ರಿ ಪಲ್ಲವಿ ಪಟ್ಟಣದ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾಭ್ಯಾಸ ಮಾಡುವಾಗ ೆಬ್ರವರಿಯಲ್ಲಿ ಶಾಲೆಗೆ ಲಗೇಜ್ ಆಟೋದಲ್ಲಿ ಹೋಗುತ್ತಿದ್ದಾಗ ಆಕಸ್ಮಿಕವಾಗಿ ಬಿದ್ದು ಮಿದುಳಿನಲ್ಲಿ ರಕ್ತಸ್ರಾವವಾಗಿ ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾಳೆ. ಪಲ್ಲವಿ 20 ದಿನಗಳವರೆಗೆ ಪಜ್ಞಾಹೀನಳಾಗಿದ್ದಳು. ಮಿದುಳಿನಲ್ಲಿ ಹೆಪ್ಪುಗಟ್ಟಿದ್ದ ರಕ್ತವನ್ನು ತೆಗೆಯಲು ತಲೆಯ ಚಿಪ್ಪು ತೆಗೆದು ಹೊಟ್ಟೆಯಲ್ಲಿರಿಸಿದ್ದಾರೆ. ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸೂಚನೆಯಂತೆ ವೈದ್ಯರು ಆಕೆಗೆ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಚಿಕಿತ್ಸೆ ನಂತರ ಸ್ವಲ್ಪ ಚೇತರಿಸಿಕೊಂಡ ಪಲ್ಲವಿ ಜೂನ್‌ನಲ್ಲಿ ಪೂರಕ ಪರೀಕ್ಷೆ ಎದುರಿಸಿ ಕನ್ನಡದಲ್ಲಿ 121, ಇಂಗ್ಲಿಷ್ 86, ಹಿಂದಿ 96, ಗಣಿತ 67, ವಿಜ್ಞಾನ 74, ಸಮಾಜ ವಿಜ್ಞಾನ 86 ಒಟ್ಟು 530 ಅಂಕ ಗಳಿಸಿದ್ದಾಳೆ. ಸದ್ಯ ಅಂತರಗಟ್ಟೆಯ ಕಾಲೇಜಿನಲ್ಲಿ ಪ್ರಥಮ ಪಿಯುಸಿಗೆ ದಾಖಲಾಗಿದ್ದಾಳೆ. ಈಕೆಯ ಅಕ್ಕ ಕೂಡ ಪಿಯುಸಿ ವಿದ್ಯಾರ್ಥಿನಿ.
ಪಲ್ಲವಿ ಹೊಟ್ಟೆಯಲ್ಲಿರುವ ತಲೆಯ ಚಿಪ್ಪನ್ನು ತೆಗೆದು ಮೊದಲಿನಂತೆ ಜೋಡಿಸಬೇಕಿದೆ. ಶಸ್ತ್ರಚಿಕಿತ್ಸೆಗೆ ಸುಮಾರು ಎರಡು ಲಕ್ಷ ರೂಪಾಯಿ ವೆಚ್ಚವಾಗಲಿದೆ. ದಾನಿಗಳು ಆಕೆಯ ತಂದೆಯ ಮೊಬೈಲ್ 9148923982 ಸಂಖ್ಯೆಯಲ್ಲಿ ಸಂಪರ್ಕಿಸಬಹುದು. ಆರ್ಥಿಕವಾಗಿ ಸಹಾಯ ಮಾಡುವವರು 7204732202 (ಪರಪ್ಪ) ಸಂಖ್ಯೆಗೆ ಫೋನ್ ಪೇ ಮಾಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net