ವಿದ್ಯಾರ್ಥಿನಿ ನಾಗವೇಣಿಗೆ ಸಭಾಪತಿ ಹೊರಟ್ಟಿ ಸನ್ಮಾನ

New HOratti new
Published on

ಹುಬ್ಬಳ್ಳಿ : ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 593 ಅಂಕ ಗಳಿಸಿ ರಾಜ್ಯಕ್ಕೆ 5ನೇ ಸ್ಥಾನ ಗಳಿಸಿದ ಇಲ್ಲಿನ ಗೋಪನಕೊಪ್ಪದ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ನಾಗವೇಣಿ ರಾಯಚೂರ ಅವರನ್ನು ಸಭಾಪತಿ ಬಸವರಾಜ ಹೊರಟ್ಟಿ ಅವರು ತಮ್ಮ ಗ್ರಹ ಕಚೇರಿಯಲ್ಲಿ ಬುಧವಾರ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಸವರಾಜ ಹೊರಟ್ಟಿ, ನಾಗವೇಣಿಯ ಮುಂದಿನ ಅಧ್ಯಯನಕ್ಕೆ ನಾನು ಮತ್ತು ನಮ್ಮ ಅವ್ವ ಸೇವಾ ಟ್ರಸ್ಟ್ ಸದಾ ಕಾಲ ಅಭಯದ ಹಸ್ತ ಚಾಚುತ್ತದೆ ಎಂದು ಭರವಸೆ ನೀಡಿದರು.

ದೊಡ್ಡದಾದ ಗುರಿಯನ್ನು ಇಟ್ಟುಕೊಂಡು ಅಧ್ಯಯನ ಮಾಡು. ಪ್ರತಿಭೆಗಳಿಗೆ ಸಮಾಜ ಸದಾಕಾಲ ಸ್ಪಂದಿಸುತ್ತದೆ. ಬಡತನ ಇದ್ದಲ್ಲಿ ಭಗವಂತನ ಆಶೀರ್ವಾದ ಇದ್ದೇ ಇರುತ್ತದೆ . ಕಷ್ಟಪಟ್ಟು ಕುಟುಂಬ ಸಾಕು ಎಂದು ವಿದ್ಯಾರ್ಥಿನಿ ನಾಗವೇಣಿಗೆ ಸಲಹೆ ನೀಡಿದರು.

ನಿನ್ನ ಅಧ್ಯಯನಕ್ಕೆ ತೊಂದರೆ ಬರದಂತೆ ನೋಡಿಕೊಂಡ ತಂದೆ -ತಾಯಿಗಳ ನೋವುಗಳನ್ನು ದೂರ ಮಾಡುವುದು ನಿನ್ನಿಂದ ಸಾಧ್ಯ ಎಂಬ ಭರವಸೆ ನಿನ್ನ ಹೆತ್ತವರಿಗೆ ಮೂಡಿದೆ. ಅವರಿಗೆ ನಿರಾಶೆ ಮಾಡಬೇಡ ಎಂದು ತಿಳಿಸಿದರು.

ಪ್ರಾಚಾರ್ಯರಾದ ಶೋಭಾ ಮಂಗಳಸುಳಿ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net