

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ನಾಯಕರಾದವರಿಗೆ ಮಾನವೀಯತೆ ಹಾಗೂ ಮುಂದಾಳತ್ವದ ಗುಣವಿರಬೇಕು ಎಂದು ಪೊಲೀಸ್ ಇನ್ಸಪೆಕ್ಟರ್ ಪ್ರವೀಣ ನೀಲಮ್ಮನವರ ಹೇಳಿದರು.
ಹುಬ್ಬಳ್ಳಿ ಮಂಜುನಾಥನಗರದ ಕೆಎಲ್ಇ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯ ಮಂತ್ರಿ ಮಂಡಲದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ನಾಯಕರಿಗೆ ಉತ್ತಮ ಚಾರಿತ್ರ್ಯ ಸ್ಥೈರ್ಯ, ಸ್ಪಷ್ಟ ಗುರಿ ಇರಬೇಕು. ಆತ್ಮವಿಶ್ವಾಸ ತುಂಬಿರಬೇಕು. ದೂರದೃಷ್ಟಿ, ಸ್ಥಿತಪ್ರಜ್ಞೆ ಹೊಂದಿರಲೇಬೇಕ ಎಂದರು.
ಪೊಲೀಸ್ ಇನ್ಸಪೆಕ್ಟರ್ ಮರುಳಸಿದ್ದಪ್ಪ ಆರ್.ಡಿ. ಮಾತನಾಡಿ, ವಿದ್ಯಾರ್ಥಿಗಳು ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಜಗದೀಶ ಮರಳಿ ಮಾತನಾಡಿ, ವಿದ್ಯಾರ್ಥಿಗಳು ಶಾಲಾ ಸಂಸತ್ತಿನಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಹಾಗೂ ಜೀವನದುದ್ದಕ್ಕೂ ಪ್ರಾಮಾಣಿಕರಾಗಿರಬೇಕು ಎಂದರು.
ಪೂರ್ಣಿಮಾ ನಾಯಕ್, ಚೇತನಾ ಕಸ್ತೂರಿ ಹಾಗೂ ಜ್ಯೋತಿ ರಾಶನಕರ್ ಇದ್ದರು.
ಚುನಾಯಿತರಾದ ನವನೀತರಾಜ್ ವಿ. (ಹೆಡ್ ಬಾಯ್), ರೀತ ಎಂ.(ಹೆಡ್ಗರ್ಲ್), ಶಮಂತ ಎಂ., ಅನರ್ಘ್ಯಾ ಜೆ. (ಸಾಂಸ್ಕ›ತಿಕ ಮಂತ್ರಿ), ಸಮೃದ್ಧ ಸಿ., ಸ್ಪೂರ್ತಿ ಎನ್. (ಆರೋಗ್ಯ ಮಂತ್ರಿ) ಮತ್ತು ತೇಜಸ ಎಂ., ಸೌಪರ್ಣಿಕಾ ಕೆ. ( ಕ್ರೀಡಾಮಂತ್ರಿ) ಪ್ರಮಾಣವಚನ ಸ್ವೀಕರಿಸಿದರು. ಪೃಥ್ವಿರಾಜ ಎನ್., ವಂಶಿಕಾ ಎಫ್. ಬ್ಲೂ ಹೌಸ್ನ ನಾಯಕರಾಗಿ, ಗಗನ ಡಿ., ಜಾಹ್ನವಿ ಕೆ. ಗ್ರೀನ್ ಹೌಸ್ ನಾಯಕರಾಗಿ, ಸೋಹನ್ ಪಿ., ಶ್ರೀನಿಧಿ ಎನ್. ಯಲ್ಲೊ ಹೌಸ್ ನಾಯಕರಾಗಿ ಮತ್ತು ಅಂಕಿತ ಎಸ್., ಶ್ರೇಯಾ ವಿ. ರೆಡ್ ಹೌಸ್ ನಾಯಕರಾಗಿ ನೇಮಕಗೊಂಡರು.