ಸ್ವಚ್ಛತೆ, ಆರೋಗ್ಯದತ್ತ ಗಮನ ಇರಲಿ

health camp
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್​ಟೌನ್ ಮತ್ತು ಶಾಂತಿನಿಕೇತನ ಆಂಗ್ಲ ಮಾದ್ಯಮ ಶಾಲೆಯ ಇಂಟ್​ರ್ಯಾಕ್ಟ್ ಕ್ಲಬ್ ವತಿಯಿಂದ ನಗರದ ಎಸ್​ಜೆಆರ್​ವಿಪಿ ಮಂಡಳದ ಶಾಂತಿನಿಕೇತನ ಆಂಗ್ಲ ಮಾದ್ಯಮ ಶಾಲೆಯಲ್ಲಿ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.

ಸ್ತ್ರೀರೋಗ ತಜ್ಞೆ ಡಾ. ಅನ್ನಪೂರ್ಣ ಸಾಂಬ್ರಾಣಿ ಅವರನ್ನು ಡಾ. ಕ್ಯಾಥರಿನ್ ದಿನೇಶ ಹಾಗೂ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್​ಟೌನ್ ಸದಸ್ಯರು ಸನ್ಮಾನಿಸಿದರು.

ಡಾ. ಪ್ರಕಾಶ. ವಾರಿ ಮಾತನಾಡಿ, ವಿದ್ಯಾರ್ಥಿಗಳು ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ನಾವು ಸದೃಢರಾಗಿದ್ದರೆ ಎಲ್ಲವನ್ನು ಸಾಧಿಸಬಹುದು. ಆದ್ದರಿಂದ ಮನುಷ್ಯನಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡು ಮುಖ್ಯವೆಂದು ಹೇಳಿದರು.

ಡಾ. ಕ್ಯಾಥರಿನ್ ದಿನೇಶ ಮಾತನಾಡಿ, ಮನುಷ್ಯನು ಪ್ರತಿದಿನ ಪೌಷ್ಟಿಕ ಆಹಾರ ಸೇವಿಸಬೇಕು. ಏಕೆಂದರೆ ಒಳ್ಳೆಯ ಆರೋಗ್ಯ ಪೌಷ್ಟಿಕ ಆಹಾರದಿಂದಲೆ ಸಾಧ್ಯ. ಸಾರ್ಥಕ ಮತ್ತು ಯಶಸ್ವಿ ಜೀವನಕ್ಕೆ ಉತ್ತಮ ಆರೋಗ್ಯ ಮುಖ್ಯ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿಯೇ ಇದೆ ಎಂದರು.

ಕ್ಲಬ್ ಅಧ್ಯಕ್ಷ ದಿನೇಶ ಶೆಟ್ಟಿ, ಕಾರ್ಯದರ್ಶಿ ಪ್ರವೀಣ ಬನ್ಸಾಲಿ, ಡಾ. ಶಿವಾನಂದ, ಡಾ. ರವೀಂದ್ರ ವೈ., ಡಾ. ಅಸದುಲ್ಲಾ ಕಾರಿಗಾರ, ಶಿವಪ್ರಸಾದ ಲಕ್ಕಮನಹಳ್ಳಿ, ಅಬ್ದುಲ್ ಕಾರಿಗಾರ, ಯುವರಾಜ ಕಥರಿ, ಹಿಮಾಂಶಿ ಜೈನ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net