

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಭಾಷಣಕಾರ ಮಹೇಶ ಮಾಸಾಳ ಕರೆ ನೀಡಿದರು.
ಹುಬ್ಬಳ್ಳಿಯ ದ್ಯಾವಪ್ಪನವರ -ವಳಸಂಗ ಎಜ್ಯುಕೇಶನಲ್ ಮತ್ತು ಅಕಾಡೆಮಿಕ್ ಟ್ರಸ್ಟ್ನ ಚೇತನ ಹಾಗೂ ಸಚೇತನ ಕಾಲೇಜಿನಲ್ಲಿ ಪ್ರಥಮ ಪಿಯುಸಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದ್ವಿತೀಯ ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಾದ ಸಮರ್ಥ ಗಣೋರೆ, ಸಾಕ್ಷಿ ಗಣೋರೆ, ಸೃಷ್ಟಿ ಕೂಕಟನೂರ, ಹೀನಾ ಕೌಸರ ಇವರನ್ನು ಸನ್ಮಾನಿಸಲಾಯಿತು. ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟ, ಗದಗ, ಬೆಳಗಾವಿ ಇನ್ನಿತರ ಜಿಲ್ಲೆಗಳಿಂದ ಅನೇಕ ವಿದ್ಯಾರ್ಥಿಗಳು ಪ್ರಥಮ ಪಿಯುಸಿದೆ ಪ್ರವೇಶ ಪಡೆದಿದ್ದಾರೆ.
ಟ್ರಸ್ಟ್ ಅಧ್ಯಕ್ಷ ಜಿ.ವಿ. ವಳಸಂಗ, ಕಾರ್ಯದರ್ಶಿ ಮಹೇಶ ದ್ಯಾವಪ್ಪನವರ, ನಿರ್ದೇಶಕರಾದ ಸುನೀಲ ಕಣಬಸ, ರಮೇಶ ಬಿಂಗಿ, ಪ್ರಾಚಾರ್ಯರಾದ ಎಂ.ಪಿ. ಯಡಳ್ಳಿ, ಮಹೇಶ ಖುರ್ಸಾಪುರ ಇದ್ದರು. ಪ್ರೆಸಿಲ್ಲಾ ಬ್ರಿಗಾಂಜಾ ನಿರೂಪಿಸಿದರು.