

ಮಂಗಳೂರು: ವಿದ್ಯಾಭ್ಯಾಸದ ವೀಸಾಕ್ಕೆಂದು ನಗರಕ್ಕೆ ಆಗಮಿಸಿದ ಕುಮಟಾದ ವಿದ್ಯಾರ್ಥಿನಿಯೊಬ್ಬಳು ಶುಕ್ರವಾರ ಬೆಳಗ್ಗೆ ನಾಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ನಗರ ಪೊಲೀಸರು ಬೆಂಗಳೂರಿನಲ್ಲಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಕುಮಟಾ ಹೆಬೈಲ್ ನಿವಾಸಿ ವಸುಂದರಾ ರವಿರಾಜ ನಾಯಕ್ (20) ನಾಪತ್ತೆಯಾದ ವಿದ್ಯಾರ್ಥಿನಿ.
ವಿದ್ಯಾರ್ಥಿನಿ ತನ್ನ ತಂದೆ, ತಾಯಿ ಜತೆ ವಿದ್ಯಾರ್ಥಿನಿ ವೀಸಾ ಮಾಡಲೆಂದು ಮಂಗಳೂರಿಗೆ ಆಗಮಿಸಿ, ನಗರದ ಕೆ.ಎಸ್.ರಾವ್ ರಸ್ತೆಯ ಲಾಡ್ಜ್‌ನಲ್ಲಿ ರೂಮು ಮಾಡಿದ್ದರು. ಸೆ.16ರಂದು ಬೆಳಗ್ಗ 9ಗಂಟೆಗೆ ಕೆೆಯೊಂದಕ್ಕೆ ತಿಂಡಿ ತಿನ್ನಲು ಹೋಗಿದ್ದು, ಈ ಸಂದರ್ಭ ವಸುಂಧರಾ ಲಾಡ್ಜ್‌ಗೆ ಹೋಗುವುದಾಗಿ ಹೇಳಿ ಹೋಗಿದ್ದಳು. 9.45ರ ಸುಮಾರಿಗೆ ಲಾಡ್ಜ್‌ಗೆ ಬಂದು ನೋಡಿದಾಗ ವಸುಂದರಾ ನಾಪತ್ತೆಯಾಗಿದ್ದು, ಮೊಬೈಲ್ ಸ್ವಿಚ್ ಆ್ ಆಗಿತ್ತು. ಎಲ್ಲಿ ಹುಡುಕಾಡಿದರೂ ಯುವತಿಯ ಪತ್ತೆಯಾಗಿಲ್ಲ.
ಬಂದರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು.
ವಿದ್ಯಾರ್ಥಿನಿ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬಂದರು ಪೊಲೀಸರು ಕೂಡಲೇ ಆಕೆಯ ಮೊಬೈಲ್ ಟ್ರೇಸ್ ಮಾಡಿ ಸಂಜೆ 5.30ರ ವೇಳೆ ಬೆಂಗಳೂರಿನಲ್ಲಿ ಪತ್ತೆಹಚ್ಚಿದ್ದಾರೆ.
ವಸುಂದರಾ ವಿದ್ಯಾಭ್ಯಾಸಕ್ಕಾಗಿ ಮುಂದಿನ ತಿಂಗಳು ಜರ್ಮನಿಗೆ ತೆರಳುವವರಿದ್ದು, ಈ ಕಾರಣದಿಂದ ಅಜ್ಜಿಯನ್ನು ಭೇಟಿಯಾಗಲು ಬೆಂಗಳೂರಿಗೆ ತೆರಳಿರುವುದಾಗಿ ಹೇಳಿದ್ದಾಳೆ. ಮಂಗಳೂರಿಗೆ ಆಕೆಯನ್ನು ಕರೆದುಕೊಂಡು ಬಂದ ಬಳಿಕ ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.