ವಿದ್ಯಾರ್ಥಿ ಜೀವನ ವ್ಯರ್ಥ ಮಾಡದಿರಿ

29 Sirwar 2
ಸಿರವಾರ ಬಾಲಕಿಯರ ಪ್ರೌಢ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ತಹಸೀಲ್ದಾರ್ ರವಿ ಎಸ್.ಅಂಗಡಿ, ಶಿರಸ್ತೇದಾರ್ ಫಕ್ರುದ್ದೀನ್, ಪ್ರಭಾರ ಮುಖ್ಯಶಿಕ್ಷಕ ತಮ್ಮಣ್ಣ ರಾಠೋಡ್, ಕಸಾಪ ಗೌರವ ಅಧ್ಯಕ್ಷ ಪತ್ತಾರ ನಾಗಪ್ಪ ಸಾಹುಕಾರ, ಅಧ್ಯಕ್ಷ ಸುರೇಶ ಹೀರಾ, ಕಾರ್ಯನಿರತ ಪತ್ರಕರ್ತ ಸಂಘ ಅಧ್ಯಕ್ಷ ಎಂ.ಗುಂಡಪ್ಪ, ಶಿಕ್ಷಕಿ ಮಂಜುಳಾ ಸಗರದ, ಶಿಕ್ಷಕ ಮಹಿಬೂಬ್ ಪಾಷಾ, ಕಂದಾಯ ಇಲಾಖೆ ನೌಕರ ಕೆ.ಈರೇಶ ಇದ್ದರು.
Published on

ಸಿರವಾರ: ಪ್ರತಿಯೊಬ್ಬ ವಿದ್ಯಾರ್ಥಿ ಉತ್ತಮ ಗುರಿ ಇಟ್ಟುಕೊಂಡು ವಿದ್ಯಾಭ್ಯಾಸ ಮಾಡಬೇಕು ಎಂದು ತಹಸೀಲ್ದಾರ್ ರವಿ ಎಸ್.ಅಂಗಡಿ ಹೇಳಿದರು.

ಪಟ್ಟಣದ ಬಾಲಕಿಯರ ಪ್ರೌಢ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಕನ್ನಡ ಭಾಷೆಯಲ್ಲಿ 125 ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಣ ಎಂಬುದು ದೇಶ ಸ್ಥಿತಿಯನ್ನು ಬದಲಾಯಿಸಲು ಇರುವ ಒಂದು ಅದ್ಭುತ ಶಕ್ತಿ.

ಇದನ್ನು ಸರಿಯಾದ ಸಮಯದಲ್ಲಿ ಪಡೆದರೆ ಅ ವ್ಯಕ್ತಿ ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ. ವಿದ್ಯಾರ್ಥಿ ಜೀವನ ವ್ಯರ್ಥ ಮಾಡದೆ ಉತ್ತಮ ಅಭ್ಯಾಸ ಮಾಡಿ ಶಾಲೆಗೆ, ಊರಿಗೆ, ಪಾಲಕರಿಗೆ ಉತ್ತಮ ಹೆಸರು ತನ್ನಿ ಎಂದರು.

ಹೆಚ್ಚು ಅಂಕ ಪಡೆದ ಭಾಗ್ಯ, ಸಾವಿತ್ರಮ್ಮ, ಅಶ್ವಿನಿ, ಅನ್ನಪೂರ್ಣ, ಹೇಮಲತಾ, ಅನ್ನಪೂರ್ಣ ಶರಣಪ್ಪ, ದೇವರಾಜ, ಅಮೃತಾ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net