ವಿದ್ಯಾರ್ಥಿ ಜೀವನ ಅಮೂಲ್ಯ

29BTG3
Published on

ಬೆಟಗೇರಿ: ಯಾರಿಗೂ ಮೋಸಮಾಡದೆ ಹಾಗೂ ದುಶ್ಚಟಗಳ ದಾಸರಾಗದೆ ಉತ್ತಮ ರೀತಿಯಲ್ಲಿ ಬದುಕಬೇಕು ಎಂದು ಅಥಣಿಯ ಹ್ಯೂಮನ್​ ಕಂಪ್ಯೂಟರ್​ ಬಸವರಾಜ ಉಮರಾಣಿ ಹೇಳಿದರು. ಸ್ಥಳಿಯ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರೇರಣಾ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿ, ವಿದ್ಯಾರ್ಥಿ ಜೀವನ ಅಮೂಲ್ಯವಾಗಿದೆ ಎಂದರು. ವ್ಯವಕಲನ, ಸಂಕಲನ, ಭಾಗಾಕಾರಗಳ ಕುರಿತು ಹಲವು ಚಮತ್ಕಾರದ ಉತ್ತರ ನೀಡಿದರು.ಮುಖ್ಯಶಿಕ್ಷಕ ರಮೇಶ ಅಳಗುಂಡಿ ಅಧ್ಯತೆ ವಹಿಸಿದ್ದರು. ಸಹಶಿಕರಾದ ಈಶ್ವರ ಮುನವಳ್ಳಿ, ವೈ.ಎಂ.ವಗ್ಗರ, ಗಣಪತಿ ಭಾಗೋಜಿ, ಈರಣ್ಣ ಪಟಗುಂದಿ, ಪ್ರಕಾಶ ಕುರಬೇಟ, ಶುಭಾ ಬಿ., ಭಾಗ್ಯಶ್ರೀ ನಾಯಕ, ರಾಕೇಶ ನಡೋಣೆ, ಮಂಜುನಾಥ ಸವತಿಕಾಯಿ, ಆನಂದ ಬಡಿಗೇರ, ಸಿರಾಜಅಹ್ಮದ ಜಿಡ್ಡಿಮನಿ, ಚೇತನ ಕಮತ, ಸವಿತಾ ಜೋಗಿ, ಸೌಮ್ಯಾಶ್ರೀ ಗಂಗಾ, ನಾಗರಾಜ ಅರಳಿಮಟ್ಟಿ, ಲಕ್ಷಿ$್ಮ ಕಾಶಪ್ಪನ್ನವರ, ಮಲ್ಹಾರಿ ಪೋಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net