ವಿದ್ಯಾರ್ಥಿ ಜೀವನ ಸದ್ಬಳಕೆಯಾಗಲಿ

5KATAKOL1
Published on

ಕಟಕೋಳ: ವಿದ್ಯಾರ್ಥಿ ಜೀವನ ಶ್ರೇಷ್ಠವಾದದ್ದು. ಸರಿಯಾದ ರೀತಿಯಲ್ಲಿ ವಿದ್ಯಾರ್ಥಿ ಜೀವನ ಉಪಯೋಗಿಸಿಕೊಂಡರೆ ಉನ್ನತಿ ಸಾಧಿಸಲು ಸಾಧ್ಯ ಎಂದು ಕಟಕೋಳ&ಮುದಕವಿಯ ಸಚ್ಚಿದಾನಂದ ಶ್ರೀಗಳು ಹೇಳಿದರು.

ಸ್ಥಳಿಯ ಕಟಕೋಳ ವಿದ್ಯಾವರ್ಧಕ ಸಮಿತಿಯ ಎಸ್​ಎಸ್​ಎಸ್​ವಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2024&25ನೇ ಸಾಲಿನ ಸಾಂಸತಿಕ, ಕ್ರೀಡೆ, ಎನ್​ಎಸ್​ಎಸ್​ ಹಾಗೂ ವಿವಿಧ ಟಕಗಳ ಉದ್ಘಾಟನೆ ಮತ್ತು ಬಿಎ, ಬಿಕಾಂ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಗುರುಹಿರಿಯರಿಗೆ, ಹೆತ್ತವರಿಗೆ ವಿಧೇಯರಾಗಿರಬೇಕು. ಓದು&ಬರಹದ ಜತೆಗೆ ಪಠ್ಯೇತರ ಚಟುವಟಿಕೆಗಳ ಕಡೆಗೂ ಲಕ್ಷ$್ಯ ವಹಿಸಬೇಕು. ಯೋಗ, ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ನಿರಂತರವಾಗಿ ಅಧ್ಯಯನಶೀಲರಾಗುವ ಮೂಲಕ ನಿಗದಿತ ಗುರಿ ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.

ಧನಲಕ್ಷಿ$್ಮ ಸಕ್ಕರೆ ಕಾರ್ಖಾನೆ ಅಧ್ಯ ಮಲ್ಲಣ್ಣ ಯಾದವಾಡ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಶಿಣ ಪಡೆದು ಉನ್ನತ ಹುದ್ದೆ ಪಡೆದು ಶಾಲೆಗೆ ಕೀರ್ತಿ ತರಬೇಕೆಂದರು. ನಿರ್ದೇಶಕ ಎಂ.ಎಂ. ಆತಾರ ಮಾತನಾಡಿ, ವಿದ್ಯಾರ್ಥಿಗಳಿಗೆ ಸಕಲ ರೀತಿಯ ಸೌಕರ್ಯಗಳು ಕಲ್ಪಿಸಲು ಆಡಳಿತ ಮಂಡಳಿ ಬದ್ಧ ಎಂದರು.

ಎನ್​.ಎಂ. ಜಾಲಿಮರದ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ಎನ್​.ಡಿ.ಪಾಟೀಲ, ಸಮಿತಿ ಅಧ್ಯ ಎ.ಸಿ. ಸುರಗ ಮತ್ತು ಆಡಳಿತಾಧಿಕಾರಿ ಡಾ.ಪಿ.ಕೆ.ರಾಠೋಡ ಮಾತನಾಡಿದರು. ಎಸ್​.ಎಂ.ಕಡಕೋಳ ಸ್ವಾಗತಿಸಿದರು. ಎ.ಎಲ್​. ರಾಮದುರ್ಗ, ಎಸ್​.ಎಸ್​. ಜಂಬಗಿ, ಎಸ್​.ಬಿ.ನರಗುಂದ, ಸಿ.ಬಿ. ಕಳಸಪ್ಪನವರ, ಎಸ್​.ಬಿ. ಕಳಸಪ್ಪನವರ, ಎಸ್​.ಬಿ. ಕೊಳ್ಳಾರ, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net