

ಹುಬ್ಬಳ್ಳಿ : ಕೃತಕ ಬುದ್ಧಿಮತ್ತೆ ನಿಯಂತ್ರಿತ ಸ್ವಯಂ ಶಿಫಾರಸ್ಸು ಮಾಡುವ ಅಪ್ಲಿಕೇಶನ್.., ಸ್ವಯಂಚಾಲಿತ ಮಲ್ಟಿ ಸೊ್ಟೕರ್ ರ್ಪಾಂಗ್ ವ್ಯವಸ್ಥೆ.., ವೈ ಫೈ ಆಧಾರಿತ ಸಂವಹನ ಸಾಧನ.., ಮಳೆಯಿಂದ ಮೈದಾನ ಮತ್ತು ಕ್ರಿಕೆಟ್ ಪಿಚ್ ಅನ್ನು ರಕ್ಷಿಸಲು ಸ್ವಯಂಚಾಲಿತ ಮೋಟಾರೀಕೃತ ರೋಲರ್ಗಳು ಮತ್ತು ಹವಾಮಾನನಿರೋಧಕ ಕವರ್ ಅನ್ನು ಬಳಸಿಕೊಂಡು ತ್ವರಿತವಾಗಿ ಮತ್ತು ಸುಲಭವಾಗಿ ಮೈದಾನವನ್ನು ಆವರಿಸುವ ಸಾಧನ...
ಹೀಗೆ ಹತ್ತು ಹಲವು ನಾವೀನ್ಯ ಪ್ರೊಜೆಕ್ಟ್ ಕಾಣಸಿಕ್ಕಿದ್ದು ನಗರದ ಗೋಕುಲ ರಸ್ತೆಯಲ್ಲಿರುವ ಕೆಎಲ್ಇ ತಾಂತ್ರಿಕ ಮಹಾವಿದ್ಯಾಲಯದ ಪ್ರಥಮ ವರ್ಷದ ಇಂಜನಿಯರಿಂಗ್ ವಿದ್ಯಾರ್ಥಿಗಳ ಪ್ರೊಜೆಕ್ಟ್ ಪ್ರದರ್ಶನ ಕಾರ್ಯಕ್ರಮದಲ್ಲಿ.
ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಸಮಾಜಕ್ಕೆ ಸಹಾಯವಾಗುವ ಹಲವಾರು ಉಪಕರಣಗಳು ಮತ್ತು ಅಪ್ಲಿಕೇಶನ್ ಗಳನ್ನು ವಿದ್ಯಾರ್ಥಿಗಳು ಉತ್ಸುಕತೆಯಿಂದ ಪ್ರಸ್ತುತಪಡಿಸಿದರು. ಪ್ರದರ್ಶನ ಉದ್ಘಾಟಿಸಿದ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಸ್ಟೂಡೆಂಟ್ ವೆಲ್ ಫೇರ್ ಡೀನ್ ಡಾ. ಸಂಜಯ ಕೊಟಬಾಗಿ, ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ನವೀನ ತಂತ್ರಜ್ಞಾನಗಳನ್ನು ಅರಿತು ಅದನ್ನು ಉಪಯೋಗಿಸುವ ಕಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ವಿವಿಧ ಪಿಯುಸಿ ಮತ್ತು ಡಿಪ್ಲೋಮಾ ಕಾಲೇಜುಗಳ ವಿದ್ಯಾರ್ಥಿಗಳು ಈ ಪ್ರದರ್ಶನದಲ್ಲಿ ಪಾಲ್ಗೊಂಡು, ಜ್ಞಾನ ಹೆಚ್ಚಿಸಿಕೊಂಡರು.
ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಶರದ ಜೋಶಿ ಮಾತನಾಡಿ, ಪ್ರಯೋಗ ಮತ್ತು ಪ್ರಾಜೆಕ್ಟ್ ಮೂಲಕ ಕಲಿಕೆಯು ಇಂದಿನ ಅವಶ್ಯಕತೆಯಾಗಿದೆ. ವೈಜ್ಞಾನಿಕ ತತ್ವಗಳನ್ನು ಬಳಸಿ ನಿತ್ಯದ ಸಮಸ್ಯೆಗಳನ್ನು ಪರಿಹರಿಸುವುದೇ ಇಂಜಿನಿಯರಿಂಗ್ ಶಿಕ್ಷಣದ ವಿಶೇಷತೆಯಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರತಿಯೊಂದು ವಿಭಾಗದಲ್ಲಿ ಅತ್ಯುತ್ತಮ ಪ್ರೊಜೆಕ್ಟ್್ಟಳಿಗೆ ಪ್ರಶಸ್ತಿ ಮತ್ತು ನಗದು ಬಹುಮಾನ ಕೊಡಲಾಯಿತು.
ಮಹಾವಿದ್ಯಾಲಯದ ಶೈಕ್ಷಣಿಕ ಡೀನ್ ಡಾ. ಮನು ಟಿ. ಎಂ., ಪ್ರದರ್ಶನದ ಸಂಯೋಜಕರಾದ ಡಾ. ಗಂಗಾಧರ ಬಾಗೆಹಳ್ಳಿ, ಡಾ. ಶ್ರೀಧಋ ಮಠದ, ಡಾ. ಅನಿತಾ, ವಿವಿಧ ವಿಭಾಗಗಳ ಮುಖ್ಯಸ್ಥರು, ಜಿಮಖಾನ ನಿರ್ದೇಶಕ ಡಾ. ಮಹಾಂತೇಶ ಸಜ್ಜನ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು.