ಕಾವೇರಿ ನದಿಗೆ ಹಾರಿದ ಬಿಕಾಂ ವಿದ್ಯಾರ್ಥಿ; ಕೊಚ್ಚಿಕೊಂಡು ಹೋದವ ಇನ್ನೂ ನಾಪತ್ತೆ..

Srujan
Published on

ಮಂಡ್ಯ: ವಿದ್ಯಾರ್ಥಿಯೊಬ್ಬ ಕಾವೇರಿ ನದಿಗೆ ಹಾರಿ ಕೊಚ್ಚಿಕೊಂಡು ಹೋಗಿದ್ದು, ಆತನ ಸುಳಿವು ಇನ್ನೂ ಪತ್ತೆಯಾಗಿಲ್ಲ. ಮಂಡ್ಯ ಜಿಲ್ಲೆಯಲ್ಲಿನ ಕೆಆರ್​ಎಸ್ ಜಲಾಶಯ ನೋಡಲು ಬಂದಿದ್ದಾಗ ಇಂಥದ್ದೊಂದು ದುರಂತ ಪ್ರಕರಣ ನಡೆದಿದೆ.

ಮೈಸೂರಿನ ಪಡುವಾರಹಳ್ಳಿ ಬಡಾವಣೆಯ ಸೃಜನ್ (20) ನದಿಗೆ ಹಾರಿದ ವಿದ್ಯಾರ್ಥಿ. ಈತ ಇಂದು ಸ್ನೇಹಿತರೊಂದಿಗೆ ಕೆಆರ್​ಎಸ್​ ಜಲಾಶಯ ಮತ್ತು ಕಾವೇರಿ ನದಿಯನ್ನು ನೋಡುವ ಸಲುವಾಗಿ ಬಂದಿದ್ದ.

ಕೆಆರ್​ಎಸ್​ ಗೇಟ್​ನಿಂದ ಸುಮಾರು 150 ಮೀಟರ್ ದೂರದಲ್ಲಿ ನಿಂತು ನೋಡುತ್ತಿದ್ದ ಈತ ಕಾವೇರಿ ನದಿಗೆ ಧುಮುಕಿದ್ದಾನೆ. ಭೋರ್ಗರೆಯುತ್ತಿರುವ ನದಿಯ ಹರಿವಿನ ರಭಸಕ್ಕೆ ಈತ ಕೊಚ್ಚಿಕೊಂಡು ಹೋಗಿದ್ದಾನೆ.

ಸ್ನೇಹಿತರು ಈ ಕುರಿತು ಆತನ ಮನೆಯವರಿಗೆ ಸುದ್ದಿ ಮುಟ್ಟಿಸಿದ್ದು, ಇನ್ನೂ ಆತನ ಪತ್ತೆಯಾಗಿಲ್ಲ. ನಾಳೆ ಸೃಜನ್​ಗಾಗಿ ಶೋಧ ಕಾರ್ಯ ನಡೆಯಲಿದೆ. ಕೆಆರ್​ಎಸ್​ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆತ ಯಾಕೆ ಹಾರಿದ ಎಂಬುದು ಇನ್ನೂ ನಿಗೂಢವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net