ವಿದ್ಯಾರ್ಥಿ ಉದ್ಯೋಗ ಮಿತ್ರ ಜೀವನಾಡಿ

06 06 2025_BGR RURAL_PAGE_03
Published on

ಆನೇಕಲ್​: "ವಿಜಯವಾಣಿಯ ವಿದ್ಯಾರ್ಥಿ ಉದ್ಯೋಗ ಮಿತ್ರ' ಸಂಚಿಕೆ ವಿದ್ಯಾರ್ಥಿಗಳ ಜೀವನಾಡಿಯಾಗಿದ್ದು, ಸದುಪಯೋಗಪಡಿಸಿಕೊಳ್ಳಿ ಎಂದು ಗುರೂಜಿ ವಿದ್ಯಾನಿಕೇತನ ಶಾಲೆ ಖಜಾಂಚಿ ಗೋಪಾಲಕೃಷ್ಣ ಹೇಳಿದರು.

ಪಟ್ಟಣದ ಶ್ರೀ ಗುರೂಜಿ ವಿದ್ಯಾನಿಕೇತನ ಶಾಲೆಯಲ್ಲಿ ಆಯೋಜಿಸಿದ್ದ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಜ್ಞಾನ ಎನ್ನುವುದು ಓದಿನ ಜತೆಗೆ ಪತ್ರಿಕೆಯಲ್ಲೂ ಅಡಗಿರುತ್ತದೆ. ಅದರಲ್ಲೂ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರವು ವಿದ್ಯಾರ್ಥಿಗಳಿಗೆ ಸಾಕಷ್ಟು ಜ್ಞಾನ ಬಂಡಾರದೊಂದಿಗೆ ಪ್ರತಿದಿನ ಬೆಳಗ್ಗೆ ಬರುತ್ತದೆ. ವಿದ್ಯಾರ್ಥಿಗಳು ಪತ್ರಿಕೆಯಲ್ಲಿನ ವಿದ್ಯಮಾನಗಳು ಹಾಗೂ ಶಿಕ್ಷಣಕ್ಕೆ ಪೂರಕವಾದ ಮಾಹಿತಿ ಓದಿ ತಿಳಿದುಕೊಳ್ಳಬೇಕು ಎಂದರು. ಪ್ರತಿ ದಿನ ಒಂದು ಪತ್ರಿಕೆಯನ್ನು ತೆಗೆದುಕೊಂಡು ಬಿಡುವಿನ ವೇಳೆ ಹಾಗೂ ಮನೆಯಲ್ಲಿ ಓದುವ ಹವ್ಯಾಸ ಬೆಳೆಸಿಕೊಳ್ಳಿ. ಇದರಿಂದ ಉತ್ತಮ ಫಲಿತಾಂಶ ಹಾಗೂ ಜ್ಞಾನ ಹೆಚ್ಚಿಸಿಕೊಳ್ಳಲು ಸಹಾಯ ಆಗುತ್ತದೆ ಎಂದರು.

ಕಾರ್ಯದರ್ಶಿ ಕೆ.ನಾಗರಾಜು ಮಾತನಾಡಿ, ಉದ್ಯೋಗ ಹುಡುಕುತ್ತಿದ್ದವರೂ ವಿದ್ಯಾರ್ಥಿ ಉದ್ಯೋಗ ಮಿತ್ರ ನೆರವು ಪಡೆಯುವುದು ಉಪಯುಕ್ತ ಎಂದರು. ಕೆ.ನಾಗರಾಜು, ಬಾಲಕೃಷ್ಣ, ಪ್ರಾಂಶುಪಾಲ ಛಲಪತಿ, ಶಿಕ್ಷಕರಾದ ಗೀತಾ, ಶೋಭಾಬಾಯಿ, ಎಲ್​.ಲಕ್ಷ್ಮೀ ರಜನಿ, ಪ್ರಮೀಳಾ, ಸಾವಿತ್ರಿ, ಸವಿತಾ, ನಳಿನಿ, ಸಂಧ್ಯಾ ಇತರರು ಇದ್ದರು.

ಜ್ಞಾನಾರ್ಜನೆಗಾಗಿ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆಯಲ್ಲಿರುವ ವಿಚಾರ ತಿಳಿದುಕೊಳ್ಳಬೇಕು. ಪ್ರತಿ ದಿನ ಮಕ್ಕಳ ಸಂಗಾತಿಯಾಗಿ ಬರುತ್ತಿರುವ ಪತ್ರಿಕೆಯನ್ನು ಪ್ರತಿಯೊಬ್ಬರೂ ಓದಬೇಕು. | ಛಲಪತಿ ಶಾಲೆ ಪ್ರಾಂಶುಪಾಲ ವಿದ್ಯಾರ್ಥಿಗಳಿಗೆ ಸಂಚಿಕೆಯ ಮಾಹಿತಿಗಳು ಪರೀೆಗೆ ಹೆಚ್ಚಿನ ಸಹಾಯವಾಗಲಿದೆ. ಪ್ರತಿನಿತ್ಯ ಶಿಕ್ಷಕನಂತೆ ಹೊರಬರುವ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಪತ್ರಿಕೆ ಪ್ರಾಜೆಕ್ಟ್​ ಮಾಡಲು ಉಪಯುಕ್ತವಾಗಿದೆ. | ನವೀನ್​ ಶೆಟ್ಟಿ ಕಿರಾಡಿ ವಿಜಯವಾಣಿ ವರದಿಗಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net