

ಮಮದಾಪುರ: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಭವಿಷ್ಯದ ಹಿತದೃಷ್ಟಿಯಿಂದ ನಾಡಿನ ನಂ.1 ದಿನಪತ್ರಿಕೆ ವಿಜಯವಾಣಿಯ "ವಿದ್ಯಾರ್ಥಿ ಉದ್ಯೋಗ ಮಿತ್ರ' ಪತ್ರಿಕೆಯನ್ನು ಉಚಿತವಾಗಿ ಕೊಡ ಮಾಡುತ್ತಿರುವ ಟಿ.ಆರ್.ಕಾಗಲ್ ಕಾರ್ಯ ಮಾದರಿ ಎಂದು ಮುಖ್ಯಶಿಕ ಎಸ್.ಎಸ್.ಯಡವನ್ನವರ ಹೇಳಿದರು.
ಗೋಕಾಕ ತಾಲೂಕಿನ ಶಿಲ್ತಿಬಾವಿ ಗ್ರಾಮದ ಶ್ರೀ ಕಲ್ಮೇಶ್ವರ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಜಿಪಂ ಮಾಜಿ ಸದಸ್ಯ ಟಿ.ಆರ್.ಕಾಗಲ್ ಉಚಿತವಾಗಿ ಕೊಡಮಾಡಿದ ವಿಜಯವಾಣಿ ದಿನಪತ್ರಿಕೆಯ "ವಿದ್ಯಾರ್ಥಿ ಉದ್ಯೋಗ ಮಿತ್ರ' ಪತ್ರಿಕೆ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಳೆದ ಮೂರು ವರ್ಷಗಳಿಂದ ಪತ್ರಿಕೆ ಖರೀದಿಸಿ ಮಕ್ಕಳಗೇರಿ ಜಿಪಂ ವ್ಯಾಪ್ತಿಯ ಹಲವು ಪ್ರೌಢಶಾಲೆಗಳಿಗೆ ಉಚಿತವಾಗಿ ಕಾಗಲ್ ಅವರು ಕೊಡಮಾಡಿದ್ದಾರೆ. ನುರಿತ ಶಿಕರಿಂದ ಸಿದ್ಧವಾಗುವ "ವಿದ್ಯಾರ್ಥಿ ಉದ್ಯೋಗ ಮಿತ್ರ' ಸ್ಪರ್ಧಾತ್ಮಕ ಪರೀೆ, ಪ್ರಶ್ನೋತ್ತರ ಮಾದರಿ, ಸಾಮಾನ್ಯ ಜ್ಞಾನ ಒಳಗೊಂಡು ಬಹಳಷ್ಟು ಉಪಯುಕ್ತವಾಗಿದೆ ಎಂದರು.
ಪಿಡಿಒ ಸಾಯೀಶ್ವರಿ ಮೆಣಸಿನಕಾಯಿ ಮಾತನಾಡಿ, ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಭವಿಷ್ಯದ ಅಡಿಪಾಯವಾಗಿದೆ. ಹೀಗಾಗಿ, ವಿದ್ಯಾರ್ಥಿಗಳು ನಿರಂತರ ಓದಿನೊಂದಿಗೆ ಸೌಲಭ್ಯ ಸದುಪಯೋಗಪಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿಕರಾದ ಎನ್.ಜಿ.ತೋರಣಗಟ್ಟಿ, ಜಿ.ಯು.ನಂದಿ, ಪಿ.ಎಸ್. ಅಜ್ಜನ್ನವರ, ಕುಸುಮಾ ಮನ್ಯಾಗೋಳ, ರಾಜಶ್ರೀ ಪತ್ತಾರ, ಆರ್.ಆರ್.ಹೂಗಾರ, ಗ್ರಾಪಂ ಸಿಬ್ಬಂದಿ ಬಿ.ಜಿ.ಮುಲ್ಲಾ, ವರದಿಗಾರ ಸಂಗಮೇಶ ಅಂಗಡಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.