ನದಿಯಲ್ಲಿ ಈಜಲು ಹೋದ ವಿದ್ಯಾರ್ಥಿ ಕಣ್ಮರೆ

SHIVU
Published on

ಹನೂರು: ತಾಲೂಕಿನ ದಂಟಳ್ಳಿ ಸಮೀಪದ ಅರಣ್ಯ ಪ್ರದೇಶದ ಅಂಚಿನಲ್ಲಿರುವ ದಬ್ಬದಗುಳಿ ದೇಗುಲಕ್ಕೆ ಹೊಸ ವರ್ಷದ ದಿನದಂದು ಪಾಲಕರೊಂದಿಗೆ ತೆರಳಿದ್ದ ವಿದ್ಯಾರ್ಥಿಯೊಬ್ಬ ಕಾವೇರಿ ನದಿಯಲ್ಲಿ ಈಜಲು ಹೋಗಿ ಕಣ್ಮರೆಯಾಗಿದ್ದಾನೆ.

ತಾಲೂಕಿನ ವಡಕೆಹಳ್ಳದ ರಾಜೇಶ್ ಎಂಬುವರ ಪುತ್ರ ಕೌದಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಶಿವು (13) ನದಿಯಲ್ಲಿ ಈಜಲು ಹೋಗಿ ಕಣ್ಮರೆಯಾದವನು.

ಹೊಸ ವರ್ಷದ ಪ್ರಯುಕ್ತ ಬುಧವಾರ ಮಧ್ಯಾಹ್ನ ತಂದೆ ಹಾಗೂ ಕುಟುಂಬಸ್ಥರೊಂದಿಗೆ ದಬ್ಬದಗುಳಿ ದೇಗುಲಕ್ಕೆ ತೆರಳಿದ್ದ. ಈ ವೇಳೆ ಸಮೀಪದ ಕಾವೇರಿ ನದಿಯಲ್ಲಿ ಕುಟುಂಬಸ್ಥರೊಂದಿಗೆ ಸ್ನಾನ ಮಾಡುವ ವೇಳೆ ಶಿವು ಕಣ್ಮರೆಯಾಗಿದ್ದಾನೆ. ನದಿಯಲ್ಲಿ ಮುಳುಗಿರುವುದಾಗಿ ತಿಳಿದು ಗಾಬರಿಗೊಂಡ ಕುಟುಂಬಸ್ಥರು ಹುಡುಕಾಟ ನಡೆಸಿದರು. ಆದರೆ ಎಲ್ಲೂ ಸಿಗದಿದ್ದರಿಂದ ಈಜುಗಾರರಿಂದಲೂ ಗುರುವಾರವೂ ನದಿಯಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ 2 ದಿನ ಕಳೆದರೂ ಪತ್ತೆಯಾಗಿಲ್ಲ. ನದಿಯಲ್ಲಿ ಮುಳುಗಿ ಬಾಲಕ ಮೃತಪಟ್ಟಿದ್ದಾನೆ ಎಂಬ ಶಂಕೆ ವ್ಯಕತವಾಗಿದೆ. ಸುದ್ದಿ ತಿಳಿದು ಸಂಬಂಧಿಕರು ನದಿ ದಡಕ್ಕೆ ತೆರಳಿದ್ದು, ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ವಿದ್ಯಾರ್ಥಿ ಕಾಣೆಯಾಗಿರುವ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net