

ಕೊಕ್ಕರ್ಣೆ: ವಿದ್ಯಾರ್ಥಿಮಿತ್ರದಲ್ಲಿ ಹಲವು ವಿಷಯ ಒಳಗೊಂಡಿರುವುದರಿಂದ ಅಂಕಗಳಿಸುವಿಕೆ ಮಾತ್ರವಲ್ಲದೆ, ಉದ್ಯೋಗ, ನೇಮಕಾತಿ ಮುಂತಾದ ವಿಚಾರ ಪೂರಕವಾಗಿದೆ. ಪ್ರತಿಯೋರ್ವರೂ ಇದರ ಪ್ರಯೋಜನ ಪಡೆಯಬಹುದು ಎಂದು ಬ್ರಹ್ಮಾವರ ಬಾರಕೂರು ಲಯನ್ಸ್ ಕ್ಲಬ್ ಅಧ್ಯಕ್ಷ ಜಯರಾಮ ನಾಯಕ್ ಹೇಳಿದರು.
ಬ್ರಹ್ಮಾವರದ ಎಸ್‌ಎಂಎಸ್ ಕಾಲೇಜಿನ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬ್ರಹ್ಮಾವರ ಬಾರಕೂರು ಲಯನ್ಸ್ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಮಿತ್ರ ಪ್ರಾಯೋಜಕತ್ವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಕರ ಮುಖೇನ ಕಲಿಯುವುದಲ್ಲದೇ ಪೇಪರ್ ಸಹಾಯ ಪಡೆದು ಅಧಿಕ ಅಂಕ ಗಳಿಸಬಹುದು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಈ ಹಿಂದೆ ಈ ಪತ್ರಿಕೆ ಪ್ರಯೋಜನ ಪಡೆದು ಅಧಿಕ ಅಂಕಗಳಿಸಿರುವುದನ್ನು ಕಾಣಬಹುದು ಹಾಗೂ ಮುಂದಿನ ದಿನಗಳಲ್ಲಿ ಶೇ.100ಫಲಿತಾಂಶ ದೊರೆಯಲಿ ಎಂದರು.
ಕ್ಲಬ್ ಕಾರ್ಯದರ್ಶಿ ಐವಾನ್ ದೊನತ್ ಸುವಾರಿಸ್, ಖಜಾಂಚಿ ಸಂತೋಷ್ ಕೋಟ್ಯಾನ್, ಹಿರಿಯ ಶಿಕ್ಷಕಿ ಗ್ರೇಸಿ ಮಿಲನ್ ಒಲಿವೇರಾ, ಸಹಶಿಕ್ಷಕರಾದ ಜುಲಿಯೇಟ್ ಲುವಿನ್, ವಿಷ್ಣುದಾಸ, ಚಂದ್ರಶೇಖರ್, ಪ್ರವೀರ್ ಮತ್ತಿತರರು ಉಪಸ್ಥಿತರಿದ್ದರು.