ವಿದ್ಯಾರ್ಥಿಮಿತ್ರ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ

Student-friendly, helpful for personality development
ಮನಗೂಳಿ ಪಟ್ಟಣದ ಕನಕನಗರದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ 7ನೇ ವರ್ಗದ ವಿದ್ಯಾರ್ಥಿಗಳ ಶುಭಕೋರುವ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಮಿತ್ರ ಪತ್ರಿಕೆ ವಿತರಿಸಲಾಯಿತು. ಡಾ. ಮಾಧವ ಗುಡಿ, ಶಿವಾಜಿ ಮೋರೆ, ಎಸ್​.ಎನ್​. ಬಿರಾದಾರ ಮತ್ತಿತರರಿದ್ದಾರೆ.
Published on

ವಿಜಯಪುರ: ವಿಜಯವಾಣಿ ವಿದ್ಯಾರ್ಥಿ ಮಿತ್ರ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದೆ. ತರಗತಿಯ ಕಲಿಕಾ ವಾತಾವರಣಕ್ಕೆ ಸಂಬಂಧಿಸಿದ ಪ್ರಶ್ನೋತ್ತರ, ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನ ಸೇರಿದಂತೆ ಹಲವು ಸಾಧಕರ ವ್ಯಕ್ತಿತ್ವ ಪರಿಚಯ ತಿಳಿಸಿಕೊಡುವುದರ ಮೂಲಕ ಕಲಿಕೆಗೆ ತುಂಬ ಸಹಕಾರಿಯಾಗಿದೆ ಎಂದು ಕಸಾಪ ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ ಹೇಳಿದರು.

ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಕನಕ ನಗರದಲ್ಲಿರುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 7ನೇ ವರ್ಗದ ವಿದ್ಯಾರ್ಥಿಗಳ ಶುಭಕೋರುವ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿ ಜೀವನ ಬಂಗಾರದ ಜೀವನ. ಆ ಸಮಯದಲ್ಲಿ ಶ್ರದ್ಧೆ, ಏಕಾಗ್ರತೆ ಮತ್ತು ಸತತ ಪರಿಶ್ರಮದ ಮೂಲಕ ಅಧ್ಯಯನ ನಡೆಸಿ ಜೀವನದಲ್ಲಿ ಉನ್ನತ ಸ್ಥಾನ ಅಲಂಕರಿಸಬೇಕು. ಅಲ್ಲದೆ, ತಾವು ಕಲಿತ ವಿದ್ಯಾಮಂದಿರಕ್ಕೂ ಹಾಗೂ ತಮ್ಮ ತಂದೆ ತಾಯಿಗಳಿಗೂ ಕೀರ್ತಿ ತಂದು ಹೆಮ್ಮೆಯ ಪ್ರಜೆಗಳಾಗಬೇಕೆಂದು ಸಲಹೆ ನೀಡಿದರು.

ಸಾಹಿತಿ ಸಿದ್ಧರಾಮ ಬಿರಾದಾರ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳು ಕವನ ವಾಚಿಸಿದನ್ನು ನೋಡಿದರೆ ಇದೊಂದು ಮಕ್ಕಳ ಸಮ್ಮೇಳನದಂತೆ ಭಾಸವಾಗುತ್ತಿದೆ. ಮಕ್ಕಳು ನಿರಂತರವಾಗಿ ಕವನ ರಚಿಸುವ ಮೂಲಕ ಕನ್ನಡ ಭಾಷೆಯ ಶ್ರೀಮಂತಿಕೆ ಹೆಚ್ಚಿಸಲು ಮುಂದಾಗಬೇಕು ಎಂದರು.

ವಿಜಯವಾಣಿ ಪತ್ರಿಕಾ ವಿತರಕ ಶಿವಾಜಿ ಮೋರೆ ಮಾತನಾಡಿ, ಸಾಧನೆ ಎಂಬುದು ಸಾಧಕನ ಸ್ವತ್ತೇ ವಿನಾ ಸೋಮಾರಿಯ ಸ್ವತ್ತಲ್ಲ. ಸಾಧಕನಾಗುವವನಿಗೆ ಸಹನೆ ತುಂಬ ಅವಶ್ಯಕ. ಸಹನೆ ನಿನ್ನದಾದರೆ ಸಕಲವೂ ನಿನ್ನದೆ, ವಿನಯ ನಿನ್ನದಾದರೆ ವಿಜಯವೂ ನಿನ್ನದೆ ಎಂದು ಮಾರ್ಮಿಕವಾಗಿ ಹೇಳಿದರು.

ವಿರೇಶ ಬಿರಾದಾರ ನೇತೃತ್ವದಲ್ಲಿ ವಿಜಯಪುರದ ಕಲಾ ಪ್ರಪಂಚ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಕವಿಗೋಷ್ಠಿಯಲ್ಲಿ 25ಕ್ಕೂ ಅಧಿಕ ವಿದ್ಯಾರ್ಥಿಗಳು ನನ್ನ ಬದುಕು ರೂಪಿಸಿದ ಶಾಲೆ ಎಂಬ ಶೀರ್ಷಿಕೆಯಡಿ ಕಾವ್ಯ ವಾಚಿಸಿದರು.

ಅಧ್ಯಕ್ಷತೆ ವಹಿಸಿದ್ದ ಎಸ್​ಡಿಎಂಸಿ ಅಧ್ಯ ಬೀರಪ್ಪ ಪಾರ್ಥನಳ್ಳಿ ಮಾತನಾಡಿದರು. ಮಲ್ಲು ತಳೇವಾಡ ವೇದಿಕೆಯಲ್ಲಿದ್ದರು. ಎಂ. ಸುರೇಖಾ ಹಾಗೂ ಸುಜಾತಾ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು. ಕವಿಗೋಷ್ಠಿಯಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ಮುಖ್ಯ ಗುರು ಎಸ್​.ಎನ್​. ಬಿರಾದಾರ ಸ್ವಾಗತಿಸಿದರು. ಶಿಕ ಆದಿನಾಥ ಉಪಾಧ್ಯೆ ನಿರೂಪಿಸಿದರು. ಎಂ.ಜೆ. ಪತ್ತೇಪೂರ ವಂದಿಸಿದರು. ಎಸ್​.ಎಂ. ಕಟ್ಟಿ, ಬಿ.ಎಂ. ಚೌಕಿಮಠ, ಜಿ.ವೈ. ಶಿರೋಳ, ಆರ್​.ವೈ. ದೇವಣಗಾಂವ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net