ಸಾಮಾನ್ಯ ಜ್ಞಾನ ವೃದ್ಧಿಸುವ ವಿದ್ಯಾರ್ಥಿ ಮಿತ್ರ

nrp 1 (12)
Published on

ಎನ್.ಆರ್.ಪುರ: ವಿಜಯವಾಣಿ ಪತ್ರಿಕೆ ಹೊರ ತರುತ್ತಿರುವ ವಿದ್ಯಾರ್ಥಿಮಿತ್ರದಲ್ಲಿ ಮಕ್ಕಳಿಗೆ ಸಾಮಾನ್ಯ ಜ್ಞಾನ ವೃದ್ಧಿಸುವ ಅಗತ್ಯ ಮಾಹಿತಿಗಳಿವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆ.ಟಿ.ರಘುನಾಥ್ ಗೌಡ ಹೇಳಿದರು.

ತಾಲೂಕಿನ ಅಳಲಗೆರೆ ಮುರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳಿಗೆ ತಾಲೂಕು ಕಸಾಪದಿಂದ ವಿತರಿಸಿದ ವಿದ್ಯಾರ್ಥಿಮಿತ್ರ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ಇಂದು ಮುದ್ರಣ ಮಾಧ್ಯಮಗಳು ತಮ್ಮ ಮೌಲ್ಯಗಳನ್ನು ಉಳಿಸಿಕೊಂಡಿವೆ. ವಿಜಯವಾಣಿ ಪತ್ರಿಕೆಯಿಂದ ಹೊರ ತಂದಿರುವ ವಿದ್ಯಾರ್ಥಿಮಿತ್ರ ಸಂಚಿಕೆ ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ ಬಹಳಷ್ಟು ವಿಚಾರಗಳನ್ನು ನೀಡುತ್ತದೆ. ಮಕ್ಕಳು ನಾಲ್ಕು ಗೋಡೆಗಳ ನಡುವಿನ ಶಿಕ್ಷಣದ ಜತೆಯಲ್ಲಿ ಸಮಾಜದ ಆಗು ಹೋಗುಗಳ ಬಗ್ಗೆ ಹಾಗೂ ಕಾನೂನುಗಳ ಬಗ್ಗೆಯೂ ಅರಿವು ಹೊಂದಿರಬೇಕು. ವಿದ್ಯಾರ್ಥಿ ದೆಸೆಯಿಂದಲೇ ಕಾನೂನುಗಳನ್ನು ತಿಳಿದುಕೊಳ್ಳಬೇಕು ಎಂದರು.

ವಕೀಲ ಎಸ್.ಎಸ್.ಸಂತೋಷ್‌ಕುಮಾರ್ ಮಾತನಾಡಿ, ವಿಜಯವಾಣಿ ನಂ.1ದಿನ ಪತ್ರಿಕೆಯಾಗಿದ್ದು, ಮೌಲ್ಯಾಧಾರಿತ ವಿಷಯಗಳನ್ನು ಹೊಂದಿದೆ. ಡಾ.ವಿಜಯ ಸಂಕೇಶ್ವರ ಅವರು ನಿಮಗೆಲ್ಲಾ ಮಾದರಿಯಾಗಿದ್ದಾರೆ. ಇಂದು ಅವರು ಉದ್ಯಮಿಯಾಗಿ, ಪತ್ರಿಕೋದ್ಯಮಿಯಾಗಿ ಹೊಸ ಹೊಸ ಚಿಂತನೆಗಳನ್ನು,ಆವಿಷ್ಕಾರಗಳನ್ನು ಮಾಡುತ್ತಿದ್ದಾರೆ. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗದ ಜತೆಯಲ್ಲಿ ಪತ್ರಿಕಾ ರಂಗ ಕೂಡ ಒಂದು ಅವಿಭಾಜ್ಯ ಅಂಗವಾಗಿದೆ. ಮೂರೂ ಅಂಗಗಳು ದಾರಿ ತಪ್ಪಿದರೆ ಪತ್ರಿಕಾರಂಗ ಎಚ್ಚರಿಕೆ ನೀಡುವ, ಸಮಸ್ಯೆಗಳ ಬಗ್ಗೆ ಬಿಂಬಿಸುವ ಕಾರ್ಯ ಮಾಡುತ್ತದೆ. ಡಾ.ವಿಜಯ ಸಂಕೇಶ್ವರ ಅವರು ಕೇವಲ ಒಂದು ವಾಹನದಿಂದ ಉದ್ಯಮ ಪ್ರಾರಂಭಿಸಿ ಇಂದು ಸಾವಿರಾರು ವಾಹನಗಳ ಮಾಲೀಕರಾಗಿ, ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿದ್ದಾರೆ ಎಂದರು.

ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಚಾರ್ಯೆ ಪೂರ್ಣಿಮಾ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆ.ಟಿ.ರಘುನಾಥ್‌ಗೌಡ, ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಕಾರ್ತಿಕೇಯನ್, ವರದಿಗಾರ ಎಂ.ಸಿ.ಗುರುಶಾಂತಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net