ವಿದ್ಯಾರ್ಥಿನಿ ಈಗ ಗ್ರಾಪಂ ಅಧ್ಯಕ್ಷೆ

hosuru-0
Published on

ಹೊಸೂರು: ಹೊಸೂರು ತಾಲೂಕಿನ ಬೆರಿಕೈ ಸಮೀಪದ ಕೆ.ಎನ್.ದೂಡ್ಡಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷೆಯಾಗಿ ಕಾಲೇಜು ವಿದ್ಯಾರ್ಥಿನಿ ಸಂಧ್ಯಾರಾಣಿ ಆಯ್ಕೆಯಾಗಿದ್ದಾರೆ. ಸಮೀಪ ಸ್ಪರ್ಧಿಗಿಂತ 210 ಮತಗಳ ಅಂತರದಿಂದ ಗೆಲುವು ಕಂಡ ಮೊದಲ ಕಿರಿಯ ವಯಸ್ಸಿನ ಪಂಚಾಯಿತಿ ಅಧ್ಯಕ್ಷೆ ಎನಿಸಿದ್ದಾರೆ. ಬಿಬಿಎ 2ನೇ ವರ್ಷದ ವಿದ್ಯಾರ್ಥಿನಿಯಾಗಿರುವ ಸಂಧ್ಯಾರಾಣಿ ಅವರನ್ನು ಪಂಚಾಯಿತಿ ಸದಸ್ಯರು ಸನ್ಮಾನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net