ವಿದ್ಯಾರ್ಥಿ ನಿಲಯದಿಂದ ಶಿಣಕ್ಕೆ ಅನುಕೂಲ

3savadatti1
Published on

ಸವದತ್ತಿ: ಮೆಟ್ರಿಕ್​ ನಂತರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಯರಿಗೆ ಹೆಚ್ಚಿನ ಶಿಣಕ್ಕೆ ವಿದ್ಯಾರ್ಥಿ ನಿಲಯದ ಅವಶ್ಯವಿದ್ದು, ಬರುವ ಬಜೆಟ್​ನಲ್ಲಿ ಅನುದಾನ ತಂದು ವಿದ್ಯಾರ್ಥಿ ನಿಲಯ ನಿರ್ಮಿಸಲಾಗುವುದು ಎಂದು ಶಾಸಕ ವಿಶ್ವಾಸ ವೆದ್ಯ ಭರವಸೆ ನೀಡಿದರು.

ಪಟ್ಟಣದ ಅರಣ್ಯ ಇಲಾಖೆ ಹತ್ತಿರ ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಪರಿಶಿಷ್ಟ ಜಾತಿ ಉಪ ಯೋಜನೆ ಅಡಿ 6.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಡಾ.ಬಿ.ಆರ್​. ಅಂಬೇಡ್ಕರ್​ ಮೆಟ್ರಿಕ್​ ನಂತರದ ಬಾಲಕರ ವಿದ್ಯಾರ್ಥಿ ನಿಲಯವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

100 ವಿದ್ಯಾರ್ಥಿಗಳ ವಸತಿ ನಿಲಯ ಇದಾಗಿದ್ದು, ಮುಂದೆ ಹೆಚ್ಚಿನ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದರು.

ಪಟ್ಟಣದ ತರಕಾರಿ ಮಾರುಕಟ್ಟೆಯನ್ನು 6 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿ ತರಕಾರಿ ಹಾಗೂ ಮಾಂಸದ ಅಂಗಡಿ ಸ್ಥಳಾಂತರಿಸಲಾಗುವುದು. ಪಟ್ಟಣದ ಜನತೆಗೆ 24*7 ಕುಡಿಯುವ ನೀರು ಪೂರೈಸಲು ಕ್ರಮವಹಿಸಲಾಗಿದೆ. ಪಟ್ಟಣದಲ್ಲಿ 16 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ರಸ್ತೆ, ಚರಂಡಿ, ುಟ್​ಪಾತ್​ ನಿರ್ಮಿಸುವ ಕಾಮಗಾರಿ ಸದ್ಯದಲ್ಲೇ ಆರಂಭವಾಗಲಿದೆ. ರಸ್ತೆ ಪಕ್ಕ ಅಲಂಕಾರಿಕ ವಿದ್ಯುತ್​ ದೀಪ ಅಳವಡಿಸಿ ಪಟ್ಟಣ ಸುಂದರಗೊಳಿಸಲಾಗುವುದು ಎಂದರು.

ಸಮಾಜ ಕಲ್ಯಾಣ ಇಲಾಖಾಧಿಕಾರಿ ಆರ್​.ಆರ್​. ಕುಲಕರ್ಣಿ ಮಾತನಾಡಿ, ವಿದ್ಯಾರ್ಥಿ ನಿಲಯ ನಿರ್ಮಿಸಲು ಜಾಗ ಕಲ್ಪಿಸಿದ ತಹಸಿಲ್ದಾರ್​ ಹಾಗೂ ಕಟ್ಟಡ ನಿರ್ಮಿಸಲು ಸಹಕರಿಸಿದ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು.

ತಾಪಂ ಇಒ ಆನಂದ ಬಡಕುಂದ್ರಿ, ಲೋಕೋಪಯೋಗಿ ಇಲಾಖೆ ಎಇಇ ವಿಜಯ ಸಂಗಪ್ಪಗೋಳ, ಶಿವಾನಂದ ಪಟ್ಟಣಶೆಟ್ಟಿ, ಮೌಲಾಸಾಬ ತಬ್ಬಲಜಿ, ಬಸವರಾಜ ತಳವಾರ, ರಾವೇಂದ್ರ ಪೂಜಾರ, ರಾಜು ಬಳ್ಳಾರಿ, ಮಂಜುನಾಥ ಪಾಚಂಗಿ, ಆಸ್​ೀ ಬಾಗೋಜಿಕೊಪ್ಪ, ಶಿವಕುಮಾರ ರಾಠೋಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net