ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಆಹ್ವಾನ

Application_new
Published on

ಬೆಳಗಾವಿ: ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದಲ್ಲಿರುವ ಗುರು ಶಿವಪ್ಪಯ್ಯ ಶಿವಯೋಗಿ ಮಠದಲ್ಲಿನ ಶ್ರೀಮದ ವೀರಶೈವ ಸಂಸ್ಕೃತ ವೇದ ಪಾಠಶಾಲೆ, ವಿದ್ಯಾರ್ಥಿ ನಿಲಯಕ್ಕೆ 2020-21ನೇ ಶೈಕ್ಷಣಿಕ ವರ್ಷದ ಪ್ರವೇಶಕ್ಕೆ ಅರ್ಜಿ ಅಹ್ವಾನಿಸಲಾಗಿದೆ.

ಇಲ್ಲಿ ಸೇರಬಯಸುವ ವಿದ್ಯಾರ್ಥಿಗಳು ಕರ್ನಾಟಕದ ಯಾವುದೇ ಜಿಲ್ಲೆಯಲ್ಲಿರುವ ಬಡ ಜಂಗಮ(ವೀರಮಹೇಶ್ವರ) ಕುಟುಂಬಗಳಿಗೆ ಸೇರಿದವರಾಗಿರಬೇಕು. 6ನೇ ತರಗತಿಯಿಂದ ಮುಂದಿನ ತರಗತಿಯ ಶಿಕ್ಷಣದ ವ್ಯಾಸಂಗ ಮುಂದುವರಿಸಲು ಇಚ್ಚಿಸುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಆಸಕ್ತರು ಪಾಲಕರು ಇಲ್ಲವೇ ಪೋಷಕರು ಮಾಹಿತಿಯೊಂದಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಶ್ರೀಮದ ವೀರಶೈವ ಸಂಸ್ಕೃತ ವೇದ ಪಾಠಶಾಲೆಯ ಆಡಳಿತ ಮಂಡಳಿ, ಶ್ರೀಗುರುಶಿವಪ್ಪಯ್ಯ ಶಿವಯೋಗಿಗಳ ಮಠ, ಉಗರಗೋಳ, ಸವದತ್ತಿ ತಾಲೂಕು, ಬೆಳಗಾವಿ ಜಿಲ್ಲೆ ಇವರಿಗೆ ಅ.20ರ ಒಳಗೆ ಅರ್ಜಿ ಸಲ್ಲಿಸಬೇಕು. ಮಾಹಿತಿಗೆ 9663511022, 9845480675 ಗೆ ಸಂಪರ್ಕಿಸಬಹುದು ಎಂದು ಪಾಠಶಾಲೆಯ ಆಡಳಿತ ಮಂಡಳಿಯ ಎಂ.ಆರ್. ಹಿರೇಮಠ ಹಾಗೂ ಡಾ.ಗುರುಮೂರ್ತಿ ಯರಗಂಬಳಿಮಠ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net