

ಉಪ್ಪಿನಂಗಡಿ: ತನ್ನ ಮನೆಯಲ್ಲಿಯೇ ಕಾರು ಡಿಕ್ಕಿಯಾಗಿ 4ನೇ ತರಗತಿಯ ವಿದ್ಯಾರ್ಥಿಯೋರ್ವ ಮೃತಪಟ್ಟ ದಾರುಣ ಘಟನೆ ಕೊಕ್ಕಡದ ಮಲ್ಲಿಗೆ ಮಜಲು ಎಂಬಲ್ಲಿ ಮಂಗಳವಾರ ನಡೆದಿದೆ.
ಇಲ್ಲಿನ ನಿವಾಸಿ ಅಬ್ದುಲ್ ಹಮೀದ್ ಎಂಬವರ ಪುತ್ರ ನವಾಫ್ ಇಸ್ಮಾಯೀಲ್ (9) ಮೃತ ಬಾಲಕ. ಈತ ಆತೂರಿನ ಆಯಿಷಾ ಸ್ಕೂಲ್‌ನ ನಾಲ್ಕನೇ ತರಗತಿ ವಿದ್ಯಾರ್ಥಿಯಾಗಿದ್ದು, ಶಾಲೆ ಬಿಟ್ಟು ಮನೆಗೆ ಬಂದಿದ್ದ ಈತ ತನ್ನ ಮನೆಯ ಸಿಟೌಟ್‌ನಲ್ಲಿ ಕುಳಿತು ಚಾ ಕುಡಿಯುತ್ತಿದ್ದ. ಈ ಸಂದರ್ಭ ಈತನ ಸಂಬಂಧಿಕರು ಅಂಗಳದಲ್ಲಿ ಕಾರು ಚಾಲನೆ ನಡೆಸಿದ್ದು, ಕಾರಿನ ಕ್ಲಚ್ ಜಾಮ್ ಆಗಿ ಕಾರು ಬಾಲಕನಿಗೆ ಗುದ್ದಿದೆ. ಇದರಿಂದಾಗಿ ಈತ ಗಂಭೀರ ಗಾಯಗೊಂಡಿದ್ದು, ತಕ್ಷಣವೇ ಆತನನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸುವ ಸಂದರ್ಭ ದಾರಿ ಮಧ್ಯೆ ಆತ ಮೃತಪಟ್ಟಿದ್ದಾನೆ.
ಕಾರು ಅಪಘಾತದ ಸಂದರ್ಭ ಕಾರಿನಲ್ಲಿ ಇನ್ನೋರ್ವ ಬಾಲಕನೂ ಇದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.