ಬೈಕ್ ಪಲ್ಟಿಯಾಗಿ ವಿದ್ಯಾರ್ಥಿ ಮೃತ್ಯು

Crime
Published on

ಕಾಸರಗೋಡು: ಕುಂಬಳೆ ಸನಿಹದ ಪರ್ವಾಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಪಲ್ಟಿಯಾಗಿ ಸಿರಿಬಾಗಿಲು ನೀರಾಳ ನಿವಾಸಿ ಸದಾಶಿವ ಶೆಟ್ಟಿ-ಜಯಲಕ್ಷ್ಮೀ ದಂಪತಿ ಪುತ್ರ, ಪೆರಿಯ ಪಾಲಿಟೆಕ್ನಿಕ್ ವಿದ್ಯಾರ್ಥಿ ಆಕಾಶ್ ಶೆಟ್ಟಿ(19) ಮೃತಪಟ್ಟಿದ್ದಾರೆ. ಆಕಾಶ್ ಶೆಟ್ಟಿ ಸಂಚರಿಸುತ್ತಿದ್ದ ಬೈಕ್ ಹೆದ್ದಾರಿ ಅಂಚಿನ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net