

ಶಿವಮೊಗ್ಗ: ಹಸು ಬಾಯಾರಿಕೆ ನೀಗಿಸಲು ಹೋದ ಯುವಕನೊಬ್ಬ ಅಸುನೀಗಿದ ಪ್ರಕರಣವೊಂದು ನಡೆದಿದೆ. ಶಿವಮೊಗ್ಗ ತಾಲೂಕಿನ ಬೀರನಕೆರೆ ಸಮೀಪ ಈ ಅವಘಡ ನಡೆದಿದ್ದು, ವಿದ್ಯಾರ್ಥಿಯೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ.
ಬೀರನಕೆರೆಯ ರವಿನಾಯ್ಕ (18) ಮೃತಪಟ್ಟ ಯುವಕ. ಈತ ಮಂಜುನಾಯ್ಕ ಮತ್ತು ಗೀತಾ ಬಾಯಿ ದಂಪತಿಯ ಪುತ್ರ, ಶಿವಮೊಗ್ಗ ಬಿ.ಎಚ್. ರಸ್ತೆಯ ಸರ್ಕಾರಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿದ್ದ. ಆದರೆ ಇಂದು ಎಂಪಿಎಂ ಕೆರೆಯಲ್ಲಿ ಹಸುವಿಗೆ ನೀರು ಕುಡಿಸಲು ಹೋದಾಗ ಸಾವಿಗೀಡಾಗಿದ್ದಾನೆ.
ಭಾನುವಾರ ರಜೆ ಇದ್ದುದ್ದರಿಂದ ಹಸು ಮೇಯಿಸಲು ಹೋಗಿದ್ದ. ಮಧ್ಯಾಹ್ನ ಗ್ರಾಮದ ಸಮೀಪದ ಎಂಪಿಎಂ ಕೆರೆಯಲ್ಲಿ ನೀರು ಕುಡಿಸಲು ಹೋಗಿದ್ದಾಗ ಅವಘಡ ಸಂಭವಿಸಿದೆ. ಪಾಲಕರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.