ಶಾಲಾ ಮಕ್ಕಳಿಗೆ ದಂತ ತಪಾಸಣೆ

h8-chinmaya
Published on

ಹುಬ್ಬಳ್ಳಿ: ರೋಟರಿ ಕ್ಲಬ್ ಹುಬ್ಬಳ್ಳಿ ಸೌಥ್ ಮತ್ತು ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಧಾರವಾಡ ಜಿಲ್ಲಾ ಶಾಖೆಯ ಆಶ್ರಯದಲ್ಲಿ ನಗರದ ಚಿನ್ಮಯ ವಿದ್ಯಾಲಯದಲ್ಲಿ ಇತ್ತೀಚೆಗೆ ಉಚಿತ ದಂತ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು.
ಒಟ್ಟು 3200 ಶಾಲಾ ಮಕ್ಕಳು, ಶಿಕ್ಷಕರು, ಸಿಬ್ಬಂದಿ ದಂತ ತಪಾಸಣೆ ಮಾಡಿಸಿಕೊಂಡರು. ರೋಟರಿ ಕ್ಲಬ್ ಹುಬ್ಬಳ್ಳಿ ಸೌಥ್ ಅಧ್ಯಕ್ಷ ಡಾ. ಗೌತಮ ಜಾಯದೆ, ಡಾ. ದೀಪಾ ಜಾಯದೆ, ಡಾ. ಬಿಲ್ವಾ ಪಾಚ್ಲಿಗ್, ಡಾ. ಸೋಮಶೇಖರ ಅಂಗಡಿ, ಡಾ. ಅಭಿಷೇಕ ಮೈಸೂರ್, ಡಾ. ಅಂಜಿತಾ ಶಂಭು, ಡಾ. ಅಜೀತ ಸಾಮಂತ, ಡಾ. ಕವಿತಾ ಗಾಣಿಗೇರ, ಡಾ. ತೆಹಸೀನ, ಡಾ. ಕಾವೇರಿ ಹುನಗುಂದ, ಡಾ. ಕಿರಣ ಕುಲಕರ್ಣಿ, ಡಾ. ಬಸವರಾಜ ಕಲ್ಲಾಪೂರ, ರೋಟರಿ ಸದಸ್ಯರಾದ ಹಿರೇನ ಛೇಡಾ, ಕೇತನ ಮಹೇಶ್ವರಿ, ವಿಕ್ರಮ ಜೈನ್, ವಾಣಿ ಕನಕೇರಿ, ರಘುನಾಥ ಪೈ, ಮಂಜುನಾಥ ಹೊಂಬಳ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net