ಈಜಲು ನೀರಿಗಿಳಿದ ಸಹೋದರರು ಮೃತ್ಯು

drowning
Published on

ಕುಂಬಳೆ: ಇಲ್ಲಿಗೆ ಸಮೀಪದ ಇಚ್ಲಂಗೋಡು ಅಣೆಕಟ್ಟಿನಲ್ಲಿ ಭಾನುವಾರ ಸ್ನಾನಕ್ಕೆಂದು ನೀರಿಗಿಳಿದ ಸಹೋದರರು ಮುಳುಗಿ ಮೃತಪಟ್ಟಿದ್ದಾರೆ. ಷರೀಫ್ ಅವರ ಪುತ್ರರಾದ ಶಹಾದಾದ್(12) ಮತ್ತು ಶಾಸಿನ್(8)ಮೃತಪಟ್ಟವರು.

ಭಾನುವಾರ ಸಂಜೆ 6ರ ವೇಳೆಗೆ ಬಂಬ್ರಾಣದ ಅಣೆಕಟ್ಟಲ್ಲಿ ಈಜಲು ತೆರಳಿದ ಬಾಲಕರು, ಕೆಸರಲ್ಲಿ ಹೂತು ಮೇಲೇಳಲಾಗದೆ ಮೃತಪಟ್ಟಿದ್ದಾರೆ. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿದರು.ಆದರೂ ಮಕ್ಕಳಿಬ್ಬರನ್ನೂ ರಕ್ಷಿಸಲಾಗಲಿಲ್ಲ. ಕುಂಬಳೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net