

ಹುಣಸೂರು: ವಿಶಾಲ ಮನೋಭಾವ ರೂಢಿಸಿಕೊಂಡರೆ ಸಾಧನೆ ಸುಲಭ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮೋದೂರು ಮಹೇಶಾರಾಧ್ಯ ಅಭಿಪ್ರಾಯಪಟ್ಟರು. ತಾಲೂಕಿನ ಮರದೂರು ಗ್ರಾಮದ ಲಾ ಸಲೆಟ್ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಕೌನ್ಸಿಲ್ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾಲೇಜಿನ ವಿದ್ಯಾರ್ಥಿ ಕೌನ್ಸಿಲ್ ಮುಖ್ಯ ನಾಯಕ, ನಾಯಕಿ, ವಿರೋಧ ಪಕ್ಷದ ನಾಯಕ, ಸ್ಪೀಕರ್, ಮತ್ತು ಇತರ ಹಲವು ಸಚಿವರಿಗೆ ಇದೇ ಸಂದರ್ಭ ಪ್ರಮಾಣ ವಚನ ಬೋಧಿಸಲಾಯಿತು. ರೆವರೆಂಡ್ ಫಾದರ್ ಬೈಜು, ಸಂಸ್ಥೆಯ ನಿರ್ದೇಶಕರಾದ ಫಾದರ್ ಅಲೆಕ್ಸ್ ಸೆಬಾಸ್ಟಿಯನ್, ರೆವರೆಂಡ್ ಜೋಬಿನ್ಸ್, ಸಿಸ್ಟರ್ ಮಮತಾ, ಪ್ರಾಂಶುಪಾಲ ರವಿ ದೀಪಕ್, ಸಂಯೋಜಕ ಎಂ.ಎಸ್. ಯೋಗೀಶ್, ಸಾಂಸ್ಕೃತಿಕ ಕಾರ್ಯದರ್ಶಿ ಮಧುಕರ್ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.