ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಅಗತ್ಯ

21 sirigeri 01 july photo
ಸಿರಿಗೇರಿಯಲ್ಲಿ ನಿಮಗಾಗಿ ನಾವು ಸಂಸ್ಥೆಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಶೈಕ್ಷಣಿಕ ಅರಿವು ಕಾರ್ಯಕ್ರಮದಲ್ಲಿ ಎಸ್ಪಿ ಡಾ.ಶೋಭಾರಾಣಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಹೊಳಗುಂದಿ ಲಕ್ಷ್ಮೀ, ಪ್ರಮುಖರಾದ ವಿನಯ್ ಕುಮಾರ್, ಗೋಡೆ ಶಿವರಾಜ್ ಇತರರಿದ್ದರು.
Published on

ಸಿರಿಗೇರಿ: ಶಿಕ್ಷಣ ಒಂದು ಶಕ್ತಿಯಾಗಿದ್ದು, ಅದನ್ನು ಪಡೆದವರು ಉನ್ನತ ಸ್ಥಾನಕ್ಕೆ ಹೋಗುತ್ತಾರೆ. ಸಾಧಿಸುವವರಿಗೆ ಛಲ ಇರಬೇಕು. ಪರಿಶ್ರಮದಿಂದ ಅಭ್ಯಾಸ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಎಸ್ಪಿ ಡಾ.ಶೋಭಾರಾಣಿ ಸಲಹೆ ನೀಡಿದರು.

ಗ್ರಾಮದ ಶ್ರೀ ನಾಗನಾಥೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಿಮಗಾಗಿ ನಾವು ಸಂಸ್ಥೆ ಗ್ರಾಮ ಘಟಕದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಶೈಕ್ಷಣಿಕ ಅರಿವು ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ವಿದ್ಯಾರ್ಥಿಗಳು ಯಾವುದೇ ಕಾರ್ಯಕ್ರಮ ಅಥವಾ ತರಗತಿ ಇರಲಿ ಏಕಾಗ್ರತೆಯಿಂದ ಇರಬೇಕು. ಶಿಕ್ಷಕರು ತಿಳಿಸಿದ ಕೆಲಸವನ್ನು ಅಂದೇ ಮುಗಿಸಿ ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ಹೊಳಗುಂದಿ ಲಕ್ಷ್ಮೀ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ಸಹಾಯವಾಣಿ ಲಾಂಛನ ಬಿಡುಗಡೆ ಮಾಡಿದರು. ಸಿಪಿಐ ಚಂದನ್ ಗೋಪಾಲ್, ಸಿಆರ್‌ಪಿ ಅರುಣ್ ಕುಮಾರ್, ಪಿಡಿಒ ಉಪ್ಪಾರ್ ರಾಮಪ್ಪ, ಪ್ರಮುಖರಾದ ಡ್ರೈವರ್ ಹುಲುಗಪ್ಪ, ಕೆ.ಭೀಮಲಿಂಗಪ್ಪ, ಗ್ರಾಪಂ ಸದಸ್ಯ ಎಸ್.ಎಂ ಅಡಿವೆಯ್ಯ ಸ್ವಾಮಿ, ದೇವಸ್ಥಾನದ ಧರ್ಮದರ್ಶಿ ಮಹಾರುದ್ರಗೌಡ, ಸಂಸ್ಥೆಯ ಜಿಲ್ಲಾಧ್ಯಕ್ಷ ವಿ.ಎಸ್.ವಿನಯ್ ಕುಮಾರ್, ಗೌರವ ಅಧ್ಯಕ್ಷ ಗೋಡೆ ಶಿವರಾಜ್ ಇತರರಿದ್ದರು.

ಸಂಸ್ಥೆಯ ಗ್ರಾಮ ಘಟಕದ ಗೌರವಾಧ್ಯಕ್ಷ ವಿ.ಹನುಮೇಶ್, ಅಧ್ಯಕ್ಷ ಕೊಳ್ಳಿ ಶೇಖರ್, ಉಪಾಧ್ಯಕ್ಷರಾದ ಹಳ್ಳಿಮರದ ನಾಗರಾಜ್, ಆಲಿಂ ಬಾಷಾ, ಪ್ರಧಾನ ಕಾರ್ಯದರ್ಶಿ ಪುನೀತ್ ಕುಮಾರ್ ಬಿ., ಖಜಾಂಚಿ ಶಿವಾಜಿ ರಾವ್, ಕಾರ್ಯದರ್ಶಿ ವಿರೂಪಾಕ್ಷಿ ಗೌಡ, ನಿರ್ದೇಶಕ ಸಿ.ಶಿವರಾಮಗೆ ಆದೇಶ ಪ್ರತಿ ನೀಡಲಾಯಿತು.

ಆದೇಶ ಪತ್ರ ವಿತರಣೆ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net