ಹೆಚ್ಚಿನ ಬಡ್ಡಿ ನೆಪದಲ್ಲಿ ವಿದ್ಯಾರ್ಥಿಗೆ ವಂಚನೆ

cybe crime
Published on

ಹುಬ್ಬಳ್ಳಿ: ಇನ್‌ವೆಸ್ಟ್‌ಮೆಂಟ್ ಮಾಡಿದರೆ ಡೇಲಿ ಬೇಸ್ ಆಧಾರದಲ್ಲಿ ಹೆಚ್ಚಿನ ಬಡ್ಡಿ ಕೊಡುವುದಾಗಿ ನಂಬಿಸಿ ವಿದ್ಯಾರ್ಥಿಯೊಬ್ಬರಿಂದ 7 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಲಾಗಿದೆ.

ನಗರದ ವಿದ್ಯಾರ್ಥಿ ಕಾರ್ತಿಕ ವಂಚನೆಗೆ ಒಳಗಾಗಿದ್ದಾರೆ. ಮೊಬೈಲ್‌ನಲ್ಲಿ ಸ್ಟಾಕ್ ಅನಾಲಿಸಿಸ್ ಥ್ರೋ ಎಐ ಎಂಬ ವೆಬ್ ನೋಡಿದಾಗ, ಅಪರಿಚಿತರು ವಿದ್ಯಾರ್ಥಿಯನ್ನು ವಿವಿಧ ಗ್ರೂಪ್‌ಗಳಿಗೆ ಸೇರಿಸಿದ್ದಾರೆ. ನಂತರ ಡೇಲಿ ಬೇಸ್ ಆಧಾರದ ಮೇಲೆ ಹೆಚ್ಚಿನ ಬಡ್ಡಿ ನೀಡುವುದಾಗಿ ನಂಬಿಸಿ, ವಿವಿಧ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net