35 ಲಕ್ಷ ರೂ. ಮೌಲ್ಯದ ಹೈಡ್ರೊವೀಡ್ ಗಾಂಜಾ ಸಹಿತ ವಿದ್ಯಾರ್ಥಿನಿ ಬಂಧನ

ಶಿವಮೊಗ್ಗದ ಸುಹಾನ
ಶಿವಮೊಗ್ಗದ ಸುಹಾನ
Published on
ಮಂಗಳೂರು: ಮಾದಕ ದ್ರವ್ಯ ಮಾರಾಟಕ್ಕೆ ಯತ್ನಿಸಿದ ಕಾಲೇಜು ವಿದ್ಯಾರ್ಥಿನಿ 35,00,000 ರೂ. ಮೌಲ್ಯದ ಸುಮಾರು 1 ಕೆಜಿ 42 ಗ್ರಾಮ್ ಹೈಡ್ರೊವಿಡ ಗಾಂಜಾ ಸಹಿತ ಮೂಲ್ಕಿ ಪೊಲೀಸರ ಬಲೆಗೆ ಬಿದ್ದಿದ್ದಾಳೆ.
ಕುಂದಾಪುರ ಕಾಲೇಜೊಂದರ ಬಿಸಿಎ ವಿದ್ಯಾರ್ಥಿನಿ, ಮೂಲತಃ ಶಿವಮೊಗ್ಗದ ಸುಹಾನ (21) ಬಂಧಿತ ಆರೋಪಿ. ಮುಲ್ಕಿ ಠಾಣಾ ವ್ಯಾಪ್ತಿಯ ಮುಲ್ಕಿ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ಹೈಡ್ರೊವಿಡ ಗಾಂಜಾ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೃತ್ಯಕ್ಕೆ ಬಳಸಿದ ಮೊಬೈಲ್ ಪೋನ್ ಮತ್ತು ಇತರ ಸೊತ್ತು ವಶಪಡಿಸಿಕೊಳ್ಳಲಾಗಿದೆ. ಸದ್ರಿ ಮಾದಕ ವಸ್ತುವನ್ನು ಆರೋಪಿತೆಯು ಚೆನ್ನೈ ನಿಂದ ತರಿಸಿ ಕೊಂಡು ಮಂಗಳೂರಿನಲ್ಲಿ ಅಕ್ರಮವಾಗಿ ಪೂರೈಕೆ ಮಾಡಿ ಹಣ ಗಳಿಸುವ ಉದ್ದೇಶದಿಂದ ತಂದಿರುವುದಾಗಿ ತಿಳಿದು ಬಂದಿರುತ್ತದೆ. ಈಕೆಯ ವಿರುದ್ಧ ಈ ಹಿಂದೆ ಕಾವೂರು ಪೊಲೀಸ್ ಠಾಣೆ ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್‌ನಲ್ಲಿ ಪ್ರಕರಣ ದಾಖಲಾಗಿದೆ.
ಪಣಂಬೂರು ಹಾಗೂ ಮೂಲ್ಕಿ ಪೊಲೀಸ್ ತಂಡ ಕಾರ್ಯಾಚರಣೆ ಆರೋಪಿಯನ್ನು ಬಂಧಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net