ಉತ್ತಮ ಗುಣ ಹೊಂದಿದವರೇ ಸಿರಿವಂತರು

dj hlk kuvempu trust
Published on

ಹೊಳಲ್ಕೆರೆ: ಹಣ ಇದ್ದವರು ಶ್ರೀಮಂತರಲ್ಲ, ಉತ್ತಮ ಗುಣ ಹೊಂದಿದವರು ಸಿರಿವಂತರು ಎನಿಸಿಕೊಳ್ಳಲಿದ್ದಾರೆ. ದಾನ ಧರ್ಮದ ಕೆಲಸಗಳು ಸಮಾಜದ ಘನತೆ, ಗೌರವದ ಸಂಕೇತಗಳಾಗಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್ ಹೇಳಿದರು.

ತಾಲೂಕಿನ ಶಿವಗಂಗಾ ಗ್ರಾಮದಲ್ಲಿ ಕುವೆಂಪು ಟ್ರಸ್ಟ್ ಹಮ್ಮಿಕೊಂಡಿದ್ದ ಬಡ ವಿದ್ಯಾರ್ಥಿಗಳಿಗೆ ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾವಿರಾರು ವಿದ್ಯಾರ್ಥಿಗಳ ಸ್ವಾವಲಂಬಿ ಬದುಕು ನಡೆಸಲು ಟ್ರಸ್ಟ್ ದಾರಿ ತೋರಿದೆ ಎಂದರು.

ಸರ್ಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷ ಎ.ಜಯಪ್ಪ ಮಾತನಾಡಿ, ಶಿಕ್ಷಣದಿಂದ ಸಮಾಜದಲ್ಲಿ ಗೌರವದಿಂದ ಬದುಕಲು ಸಾಧ್ಯವಾಗಲಿದೆ.

ವಿದ್ಯಾರ್ಥಿಗಳು ಶ್ರಮದಿಂದ ಓದಿ ಉತ್ತಮ ನೌಕರಿಗಳಿಸಿ ಪಾಲಕರ ಹೆಸರು ಉಳಿಸಬೇಕು ಎಂದು ತಿಳಿಸಿದರು.

ರಾಷ್ಟ್ರಪ್ರಶಸ್ತಿ ಪುರಸ್ಕೃತ ಟಿ.ಪಿ.ಉಮೇಶ್, ಅಜ್ಜಪ್ಪ ಗುರುಗಳು, ಗ್ರಾಮದ ನಿವೃತ್ತ ಸೈನಿಕ ಬಸವರಾಜಪ್ಪ, ಅಂಜನಿ, ಮಂಜಪ್ಪ ಅವರನ್ನು ಸನ್ಮಾನಿಸಲಾಯಿತು.

ವಿವಿಧ ಶಾಲೆಗಳ ನೂರಕ್ಕು ಹೆಚ್ಚು ವಿದ್ಯಾರ್ಥಿಗಳಿಗೆ ನೋಟ್ ಬುಕ್, ಲೇಖನ ಸಾಮಗ್ರಿ, ಟೈಲರಿಂಗ್ ಕಲಿತ ಮಹಿಳೆಯರಿಗೆ ಟೈಲರ್ ಮಷಿನ್‌ಗಳನ್ನು ಟ್ರಸ್ಟ್ ವತಿಯಿಂದ ವಿತರಿಸಲಾಯಿತು.

ಟ್ರಸ್ಟ್ ಅಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಡಾ.ಗೀತಾ, ಇಸಿಒ ಕರಿಸಿದ್ದಪ್ಪ, ಈಚಘಟ್ಟ ಸಿಆರ್‌ಪಿ ಮುರುಳಿ, ಮುಖ್ಯ ಶಿಕ್ಷಕರ ರುದ್ರಪ್ಪ, ಶಾಂತಕುಮಾರ, ಚಂದ್ರಮ್ಮ, ಶಿವಗಂಗಾ ವಸಂತಕುಮಾರ, ಸತೀಶ್, ವಾಣಿ ಗಿರೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net