

ವಿರಾಜಪೇಟೆ: ನಗರದ ಟೇಕ್ವಂಡೋ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಕರ್ನಾಟಕ ಟೇಕ್ವಂಡೋ ಅಶೋಸಿಯೇಷನ್ ವತಿಯಿಂದ ಬೆಂಗಳೂರಿನ ಬಸವೇಶ್ವರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಮುಕ್ತ ಟೇಕ್ವಂಡೋ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿ ಉತ್ತಮ ಸಾಧನೆ ತೋರಿದ್ದಾರೆ.
ಕೂರ್ಗ್ ಪಬ್ಲಿಕ್ ಸ್ಕೂಲ್‌ನ ಆರನೇ ತರಗತಿ ವಿದ್ಯಾರ್ಥಿನಿ ಪಟ್ಟಡ ಕಾಂಚನಾ ಎರಡು ಚಿನ್ನದ ಪದಕ, ವಿರಾಜಪೇಟೆ ಸಂತ ಅನ್ನಮ್ಮ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿಗಳಾದ ಅಖಿಲೇಶ್, ಸಂಜಯ್ ಎಸ್.ಪಿ., ಹಾಗೂ ದಿಲನ್, ಕಾಲ್ಸ್ ಶಾಲೆಯ ಐದನೇ ತರಗತಿ ವಿದ್ಯಾರ್ಥಿ ವಿಹಾನ್ ಎಸ್., ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ವಿದ್ಯಾರ್ಥಿಗಳಾದ ರುಹಾನ್, ದನ್ಯತಾ, ನಿಯೋನ್ ಜೋಸೆಫ್ ಅವರು ತಲಾ ಒಂದು ಚಿನ್ನ ಮತ್ತು ಒಂದು ಬೆಳ್ಳಿ ಪದಕವನ್ನು ಗಳಿಸಿ ಸಾಧನೆ ಮಾಡಿದ್ದಾರೆ. ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿರಾಜಪೇಟೆಯ ಟೇಕ್ವಂಡೋ ಟ್ರೈನಿಂಗ್ ಕೇಂದ್ರದ ತರಬೇತುದಾರ ಮಾಸ್ಟರ್ ಅರುಣ್‌ಕುಮಾರ್ ಮಾರ್ಗದರ್ಶನ ನೀಡಿದ್ದರು.