ತೋಡಿಗೆ ಬಿದ್ದು ಬಾಲಕ ಸಾವು

drowning
Published on

ಹೆಬ್ರಿ: ಉಡುಪಿ ಜಿಲ್ಲೆಯಲ್ಲಿ ಮಳೆ ಚುರುಕುಗೊಂಡಿದ್ದು, ತೋಡು ತುಂಬಿ ಹರಿಯುತ್ತಿದೆ. ಶುಕ್ರವಾರ ಹೆಬ್ರಿಯ ಅಮೃತ ಭಾರತಿ ವಿದ್ಯಾಲಯದ ವಿದ್ಯಾರ್ಥಿ ಶ್ರೀಶಾಂತ್ ಭಟ್ (10) ಎಂಬಾತ ತನ್ನ ಮನೆ ಎದುರು ಹರಿಯುತ್ತಿದ್ದ ತೋಡಿಗೆ ಬಿದ್ದು ಮೃತಪಟ್ಟಿದ್ದಾನೆ. ತೋಟದಲ್ಲಿರುವ ನೀರಿನ ತೋಡಿಗೆ ಹಾಕಿರುವ ಮರದ ಸಂಕವನ್ನು ದಾಟುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಾಲಕ ಬಿದ್ದಿದ್ದು, ತೋಡಿನ ನೀರಿನ ಸೆಳೆತಕ್ಕೆ ಸಿಕ್ಕಿ ಸಾವನ್ನಪ್ಪಿದ್ದಾನೆ. ಈತ ಹೆಬ್ರಿ ಕಾನ್‌ಬೆಟ್ಟಿನ ದಯಾನಂದ್ ಭಟ್ ಎಂಬುವರ ಪುತ್ರ. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net