ಜಾತೀಯತೆ ತೊಲಗಿಸಲು ಹೋರಾಟ

3 lxr 2 HADAPADA
Published on

ಲಕ್ಷೆ್ಮೕಶ್ವರ: 250ಕ್ಕೂ ಅಧಿಕ ವಚನಗಳನ್ನು ರಚಿಸಿ ವಚನ ಸಾಹಿತ್ಯಕ್ಕೆ ಹಡಪದ ಅಪ್ಪಣ್ಣನವರ ಅಪಾರ ಕೊಡುಗೆ ನೀಡಿದ್ದಾರೆ ಎಂದು ತಹಸೀಲ್ದಾರ್ ಕೆ. ಆನಂದಶೀಲ ಹೇಳಿದರು.

ತಾಲೂಕಾಡಳಿತ ಮತ್ತು ಹಡಪದ ಸಮಾಜದವರಿಂದ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ನಿಜಶರಣ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. 12ನೇ ಶತಮಾನದಲ್ಲಿ ಜಾತೀಯತೆ ತೊಲಗಿಸಲು ನಡೆದ ಕ್ರಾಂತಿಯಲ್ಲಿ ಹಡಪದ ಅಪ್ಪಣ್ಣನವರು ಪ್ರಮುಖ ಪಾತ್ರವಹಿಸಿದ್ದರು ಎಂದರು.

ಸಮಾಜದ ತಾಲೂಕಾಧ್ಯಕ್ಷ ಗುಡ್ಡಪ್ಪ ಹಡಪದ ಮಾತನಾಡಿ, ಹಡಪದ ಸಮಾಜದವರು ಅಪ್ಪಣ್ಣನವರ ವಚನದ ಪುಸ್ತಕಗಳನ್ನು ಮನೆಯಲ್ಲಿಟ್ಟುಕೊಂಡು ನಿತ್ಯವೂ ಅವರ ವಚನಗಳನ್ನು ಮಕ್ಕಳಿಗೆ ಹಾಗೂ ಕುಟುಂಬದ ಎಲ್ಲರಿಗೂ ಓದಿಸಬೇಕು. ಆಗ ಅಪ್ಪಣ್ಣನವರ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಅನುಕೂಲವಾಗುತ್ತದೆ ಎಂದರು.

ಕಂದಾಯ ನಿರೀಕ್ಷಕ ಬಿ.ಎಂ. ಕಾತ್ರಾಳ, ಸಮಾಜದ ವಿನೋದ ಎಚ್.ಎಸ್., ಮುತ್ತಪ್ಪ ನಾವಿ, ಲಕ್ಷ್ಮಣ ನಾವಿ, ದುಂಡಪ್ಪ ರಾಮಗೇರಿ, ಶಂಕರ ನಾವಿ, ಮಲ್ಲಿಕಾರ್ಜುನ ಹಡಪದ, ಈರಣ್ಣ ಹಡಪದ, ಗುರುರಾಜ ಹಡಪದ, ಶಂಕರ ಹಡಪದ ರಮೇಶ ನಾವಿ, ಸೇರಿದಂತೆ ಹಡಪದ ಸಮಾಜದವರು, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net