ಮಾಗಡಿಗೆ ಹೇಮೆ ಹರಿಸಲು ಹೋರಾಟ ಅನಿವಾರ್ಯ

ಮಾಗಡಿ
ಮಾಗಡಿ ಪುರಸಭೆಯ ನಾಡಪ್ರಭು ಕೆಂಪೇಗೌಡ ಪ್ರತಿಮೆ ಆವರಣದಲ್ಲಿ ತಾಲೂಕು ರೈತ ಸಂಘ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ತಾಲೂಕು ರೈತಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್, ಯುವಘಟಕದ ಅಧ್ಯಕ್ಷ ರವಿಕುಮಾರ್, ಶಿವಲಿಂಗಯ್ಯ, ಲಿಂಗಪ್ಪ, ಬುಡಾನ್‌ಸಾಬ್ ಇದ್ದರು .
Published on

ಮಾಗಡಿ: ಮಾಗಡಿಗೆ ಹೇಮಾವತಿ ನದಿ ನೀರಿಗಾಗಿ ಹೋರಾಟ ಅನಿವಾರ್ಯವಾಗಿದ್ದು, ಪಕ್ಷಾತೀತ, ಜಾತ್ಯತೀತವಾಗಿ ರೈತರು, ಯುವಶಕ್ತಿಗಳು ಹೋರಾಟಕ್ಕೆ ಮುಂದೆ ಬರಬೇಕು ಎಂದು ತಾಲೂಕು ರೈತಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಮನವಿ ಮಾಡಿದರು.

ಪುರಸಭೆಯ ನಾಡಪ್ರಭು ಕೆಂಪೇಗೌಡ ಪ್ರತಿಮೆ ಆವರಣದಲ್ಲಿ ತಾಲೂಕು ರೈತ ಸಂಘವು ವಿಶ್ವಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನಲ್ಲಿ ಅನೇಕ ಮಠಗಳಿವೆ, ರೈತ ಸಂಘಟನೆ ವತಿಯಿಂದ ವಿವಿಧ ಮಠಾಧೀಶರನ್ನು ಭೇಟಿ ಮಾಡುತ್ತೇವೆ. ತುಮಕೂರಿನಿಂದ ಎಕ್ಸ್‌ಪ್ರೆಸ್ ಕೆನಾಲ್ ಮೂಲಕವೇ ಹೇಮೆ ನೀರನ್ನು ಮಾಗಡಿಗೆ ತರಬೇಕೆಂದು ಶಪಥ ಮಾಡಬೇಕಿದೆ. ತುಮಕೂರಿನ ಜನನಾಯಕರ ಮನವೊಲಿಸುವ ಕೆಲಸಕ್ಕೆ ಜನಪ್ರತಿನಿಧಿಗಳು ಕೈಜೋಡಿಸಬೇಕು. ಇದರಲ್ಲಿ ಯಾವುದೇ ರಾಜಕೀಯ ಬೇಡ ಎಂದು ಮನವಿ ಮಾಡಿದರು.

ಯುವಶಕ್ತಿ ತಮ್ಮ ಹುಟ್ಟಿದ ದಿನದ ಅಂಗವಾಗಿ ಒಂದು ಫಲಬಿಡುವ ಹಣ್ಣಿನ ಸಸಿ ನೆಟ್ಟು ಅದನ್ನು ರಕ್ಷಣೆ ಮಾಡಿದರೆ ಅದಕ್ಕಿಂತ ಪುಣ್ಯದ ಕೆಲಸ ಮತ್ತೊಂದಿಲ್ಲ ಎಂದರು .ಮುಖಂಡರಾದ ವೆಂಕಟೇಶ್, ಹನುಮಂತಯ್ಯ, ನಾರಾಯಣಪ್ಪ, ರಾಮಣ್ಣ, ಆಂಜನಪ್ಪ, ಸಿದ್ದಪ್ಪ, ನಾಗರಾಜು, ಶಿವಲಿಂಗಯ್ಯ, ಶಿವಣ್ಣ, ರಂಗಯ್ಯ, ಚೆನ್ನರಾಯಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net