ಹಿಂದು ಧರ್ಮ ಉಳಿಯಲು ಹೋರಾಟ ಅನಿವಾರ್ಯ

mutalik
Published on

ಹುಬ್ಬಳ್ಳಿ: ಲವ್ ಜಿಹಾದ್ ಹೆಸರಲ್ಲಿ ಹಿಂದು ಯುವತಿಯರನ್ನು ಹಾಗೂ ಯುವಕರಿಗೆ ಆಸೆ ತೋರಿಸಿ ಮತಾಂತರ ಮಾಡುವುದು ಮನೆ ಮನೆಗಳಲ್ಲಿ, ಊರು-ಕೇರಿಗಳಲ್ಲಿ ನಡೆದಿದೆ. ಹಿಂದು ಧರ್ಮ ಉಳಿಯಲು ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಮತಾಂತರ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ 3 ದಿನಗಳಲ್ಲಿ ಎರಡು ಮೂರು ಪ್ರಕರಣಗಳು ಬೆಳಕಿಗೆ ಬಂದಿವೆ. ಚಿಕ್ಕಬಳ್ಳಾಪುರ, ಚಿತ್ರದುರ್ಗ ಜಿಲ್ಲೆಯಲ್ಲಿ ಅಬ್ಬಾಸ್ ಎಂಬ ಹೆಸರಿನಿಂದ ಮತಾಂತರ ನಡದಿದೆ. ಇದು ಅಕ್ಷಮ್ಯ ಅಪರಾಧ. ಮುಸ್ಲಿಂ, ಕ್ರಿಶ್ಚಿಯನ್ ಧರ್ಮದವರು ವಾಸ ಮಾಡಲು ದೇಶದಲ್ಲಿ ಅವಕಾಶ ಕಲ್ಪಿಸಲಾಗಿದೆ. ಕಾನೂನು ಉಲ್ಲಂಘನೆ ಮಾಡಿ ಮತಾಂತರ ಮಾಡಲು ಅಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಮುಸ್ಲಿಮರು, ಕ್ರಿಶ್ಚಿಯನ್ನರು ತಾವೇ ಅಧಿಕಾರಕ್ಕೆ ಬಂದವರಂತೆ ವರ್ತಿಸುತ್ತಿದ್ದಾರೆ. ಅವರಿಗೆ ಸಂಘರ್ಷಕ್ಕೆ ಇಳಿಯುವ ಮನಸ್ಥಿತಿ ಇದೆ. ಇದಕ್ಕೆ ನಾವು ಆಸ್ಪದ ಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net