ವಸತಿಹೀನರಿಗೆ ನ್ಯಾಯ ಕೊಡದಿದ್ದರೆ ಹೋರಾಟ

kriyappa
Published on

ಹುಬ್ಬಳ್ಳಿ: ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯಂದ ನ್ಯಾಯ ಸಿಗದೇ ವಸತಿಹೀನರು ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಕೂಡಲೇ ನಗರ ಮತ್ತು ಗ್ರಾಮೀಣ ಭಾಗದಲ್ಲಿ ವಸತಿಗಾಗಿ 94 ಮತ್ತು 94ಸಿಸಿ ಅರ್ಜಿ ಹಾಕಿದವರಿಗೆ ನ್ಯಾಯ ಕೊಡಬೇಕು. ಇಲ್ಲದಿದ್ದರೆ ಶೀಘ್ರವೇ ಹೋರಾಟ ನಡೆಸಲಾಗುವುದು ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಕರಿಯಪ್ಪ ಗುಡಿಮನಿ ಎಚ್ಚರಿಕೆ ನೀಡಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋರಾಟದ ರೂಪುರೇಷೆಗಳನ್ನು ಅಣಿಗೊಳಿಸಲಾಗುವುದು. ಜಿಲ್ಲೆ, ತಾಲೂಕು ಹಾಗೂ ಗ್ರಾಮೀಣ ಭಾಗದಲ್ಲಿ ಪದಾಧಿಕಾರಿಗಳನ್ನು ನೇಮಿಸಲಾಗುವುದು. ‘ನಮ್ಮ ಭೂಮಿ ನಮ್ಮ ಹಕ್ಕು, ಭಿಕ್ಷೆಯಲ್ಲ’, ‘ನಮ್ಮ ವಸತಿ ನಮ್ಮ ಹಕ್ಕು, ಭಿಕ್ಷೆಯಲ್ಲ ಭಿಕ್ಷೆಯಲ್ಲ’ ಎಂಬ ಘೊಷಣೆ ಅಡಿ ಹೋರಾಟ ನಡೆಸಲಾಗುವುದು ಎಂದು ವಿವರಿಸಿದರು.

ಮಂಜುನಾಥ ಕೊಂಡಪಲ್ಲಿ (ಜಿಲ್ಲಾ ಸಂಚಾಲಕ), ಸಂತೋಷ ಚಲುವಾದಿ, ಸರಸ್ವತಿ ಕಟ್ಟಿಮನಿ, ಹುಸೇನಬಾಷಾ ತಳೇವಾಡ (ಸದಸ್ಯರು), ಲಕ್ಷ್ಮಣ ಬಕ್ಕಾಯಿ (ಕಾನೂನು ಸಲಹೆಗಾರ), ನಾಗೇಶ ಕತ್ರಿಮಾಲ (ಖಜಾಂಚಿ), ಇಂಧುಮತಿ ಸಿರಗಾವಿ, ಮಮತಾ ಅರಿವೆಡು (ಸಹಾಯಕ ಖಜಾಂಚಿ), ಜನ್ನೆ ಜೈರಾಮ, ಚಂದ್ರಕಾಂತ ಯಾದವ (ಸಂಘಟನಾ ಸಂಯೋಜಕರು) ಅವರನ್ನು ಇತ್ತೀಚೆಗೆ ನಗರದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ ಎಂದರು.

ಮಂಜುನಾಥ ಕೊಂಡಪಲ್ಲಿ, ಸಂತೋಷ ಚಲುವಾದಿ, ಸರಸ್ವತಿ ಕಟ್ಟಿಮನಿ, ಹುಸೇನ್​ಬಾಷಾ ತಳೇವಾಡ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net