ಬ್ರಾಹ್ಮಣ ಸಮಾಜದಿಂದ ಹೋರಾಟ

Struggle from the Brahmin community
ಬಸವನಬಾಗೇವಾಡಿಯಲ್ಲಿ ವಿಪ್ರ ಸಮಾಜದವರು ಶನಿವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ವಿಠ್ಠಲ ಕುಲಕರ್ಣಿ, ಅನೀಲ ದೇಶಪಾಂಡೆ, ವಿನಾಯಕ ದೇಶಪಾಂಡೆ, ಸಂಜೀವ ಕುಲಕರ್ಣಿ, ಅನೀಲ ಕುಲಕರ್ಣಿ, ರಮೇಶ ಇನಾಂದಾರ ಇತರರಿದ್ದರು.
Published on

ಬಸವನಬಾಗೇವಾಡಿ: ಸಿಇಟಿ ಪರೀಕ್ಷೆಯಲ್ಲಿ ರಾಜ್ಯದ ವಿವಿಧ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಧರಿಸಿದ್ದ ಜನಿವಾರ ತೆಗೆಸಿ ಕಸದ ಬುಟ್ಟಿಗೆ ಹಾಕಿದ್ದನ್ನು ಖಂಡಿಸಿ ತಾಲೂಕು ಬ್ರಾಹ್ಮಣ ಸಮಾಜದ ಪ್ರಮುಖರು ಶನಿವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ವಿಪ್ರ ಸಮಾಜದ ಮುಖಂಡ ವಿಠ್ಠಲ ಕುಲಕರ್ಣಿ ಮಾತನಾಡಿ, ಸಿಇಟಿ ಪರೀಕ್ಷೆ ಸಂದರ್ಭದಲ್ಲಿ ಬ್ರಾಹ್ಮಣ ವಿದ್ಯಾರ್ಥಿ ಜನಿವಾರ ತೆಗೆಸಿದ್ದು ಸಂವಿಧಾನ ವಿರೋಧಿ ಕೃತ್ಯ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಅನೀಲ ದೇಶಪಾಂಡೆ, ವಿನಾಯಕ ದೇಶಪಾಂಡೆ, ಸಂಜೀವ ಕುಲಕರ್ಣಿ, ಅನೀಲ ಕುಲಕರ್ಣಿ , ರಮೇಶ ಇನಾಂದಾರ, ಕಿರಣ್ ಕುಲಕರ್ಣಿ, ಮುಕುಂದ ದೇಶಪಾಂಡೆ, ಗೋವಿಂದ ಕುಲಕರ್ಣಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net