ಇಂಟಿಗ್ರೇಟೆಡ್​ ಟೌನ್​ಶಿಪ್​ನಿಂದ ಯಾರಿಗೆ ಲಾಭ? ಕುಣಿಗಲ್​ ಕುದುರೆ ಫಾರ್ಮ್ ಉಳಿವಿಗೆ ಹೋರಾಟ ನಿರಂತರ

Kunigal Farm
Published on

ಬೆಂಗಳೂರು: ಕುಣಿಗಲ್​ ಕುದುರೆ ಫಾರ್ಮ್ ಉಳಿವಿಗಾಗಿ ಅಲ್ಲಿ ಈಗಾಗಲೇ ಬೃಹತ್​ ಪ್ರತಿಭಟನೆ ನಡೆದಿದ್ದು. ಪಾತೀತವಾಗಿ ಸಹಸ್ರಾರು ಜನರು ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಆದರೂ ಇದಕ್ಕೆ ಕಿವಿಗೊಡದ ಶಾಸಕ ರಂಗನಾಥ್​ ಮತ್ತು ಸಂಸದ ಡಿ.ಕೆ. ಸುರೇಶ್​ ಅವರು ಜನರ ಭಾವನೆಗಳಿಗೆ ಘಾಸಿ ಮಾಡುವ ಸಾಹಸಕ್ಕೆ ಕೈಹಾಕಿದ್ದಾರೆ. ಅವರ ನಿರ್ಧಾರ ಕೈಬಿಡುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಜೆಡಿಎಸ್​ ತಾಲೂಕು ಅಧ್ಯಕ್ಷ ಜಗದೀಶ್​ ಎಚ್ಚರಿಕೆ ನೀಡಿದ್ದಾರೆ.

ಐತಿಹಾಸಿಕ ಕುಣಿಗಲ್​ ಕುದುರೆ ಫಾಮ್​ರ್ ಜಾಗದಲ್ಲಿ ಇಂಟಿಗ್ರೇಟೆಡ್​ ಟೌನ್​ಶಿಪ್​ ಬೇಡ ಎಂದು ನಡೆಯುತ್ತಿರುವ ಹೋರಾಟದ ಭಾಗವಾಗಿ ಶನಿವಾರ ಬೆಂಗಳೂರಿನ ಪ್ರೆಸ್​ಕ್ಲಬ್​ನಲ್ಲಿ ವೃ ಫೌಂಡೇಶನ್​ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಇಂಟಿಗ್ರೇಟೆಡ್​ ಟೌನ್​ಶಿಪ್​ನಿಂದ ಯಾರಿಗೆ ಯಾವ ರೀತಿ ಲಾಭ ಎಂಬುದನ್ನು ಶಾಸಕರು ಕ್ಷೇತ್ರದ ಜನರ ಮುಂದೆ ಸ್ಪಷ್ಟಪಡಿಸಬೇಕು. ಸ್ಟಡ್​ ಫಾಮ್​ರ್ ಜಾಗವೇ ಯಾಕೆ ಬೇಕು? ತಾಲೂಕಿನಲ್ಲಿ ಸಾವಿರಾರು ಎಕರೆ ಸರ್ಕಾರಿ ಜಾಗವಿದೆ, ಅದನ್ನ ಬಳಸಿಕೊಳ್ಳಲಿ ಎಂದರು.

ವೈದ್ಯ ವಿಜಯ್​ ನಿಶಾಂತ್​ ಮಾತನಾಡಿ, ಕುಣಿಗಲ್​ ಕುದುರೆ ಫಾರ್ಮ್ ನಾಡಿನ ಹೆಮ್ಮೆ. ಅಲ್ಲಿ ನೂರಾರು ವರ್ಷಗಳ 200ಕ್ಕೂ ಹೆಚ್ಚು ಮರಗಳಿವೆ. ಐತಿಹಾಸಿಕ ಹಿನ್ನೆಲೆಯುಳ್ಳ ಈ ಫಾರ್ಮ್ ಉಳಿವು ಅತ್ಯಗತ್ಯ. ವಿದೇಶದಲ್ಲೂ ಈ ಬಗ್ಗೆ ಅಭಿಯಾನ ಮಾಡುತ್ತಿದ್ದೇವೆ. ಕುಣಿಗಲ್​ ಕುದುರೆ ಫಾರ್ಮ್ ಉಳಿವಿಗಾಗಿಬೆಂಗಳೂರಿನಿಂದ ಕುಣಿಗಲ್​ವರೆಗೆ 18ರಂದು ಬೈಕ್​ ರ್ಯಾಲಿ ನಡೆಯಲಿದೆ ಎಂದು ತಿಳಿಸಿದರು.

ಕುಣಿಗಲ್​ ಕುದುರೆ ಫಾಮ್​ರ್ ಅನ್ನು ಯಥಾಸ್ಥಿತಿಯಲ್ಲಿ ಉಳಿಸಬೇಕೆಂದು ಈಗಾಗಲೇ ಸರ್ಕಾರಕ್ಕೆ ಮನವಿ ಪತ್ರ ನೀಡಿದ್ದೇವೆ. ಆದರೂ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಿಲ್ಲ. ಸ್ಥಳಿಯ ಶಾಸಕರು, ಇಲ್ಲಿ ಶಿಣ ಸಂಸ್ಥೆ ತೆರೆದು ಯುವಕರಿಗೆ ಉದ್ಯೋಗ ನೀಡುತ್ತೇವೆ ಎನ್ನುವ ಮೂಲಕ ಗೊಂದಲ ಉಂಟು ಮಾಡುತ್ತಿದ್ದಾರೆ. ಈ ಜಾಗದಲ್ಲಿ ಸರ್ಕಾರ ಕುದುರೆಗೆ ಸಂಬಂಧ ಇಲ್ಲದ ಯಾವುದೇ ಯೋಜನೆ ತಂದರೂ ನಮ್ಮ ವಿರೋಧವಿದೆ.

-ಜಿ.ಕೆ. ನಾಗಣ್ಣ, ಹೋರಾಟಗಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net