ಕುಡಿಯುವ ನೀರಿಗೆ ಪರದಾಟ

 ಮದ್ದೂರು ತಾಲೂಕು ಕದಲೀಪುರದಲ್ಲಿ ಕುಡಿಯುವ ನೀರಿಗೆ ತೊಂದರೆ ಅನುಭವಿಸುವಂತಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ನಂದೀಶ್‌ಗೌಡ, ತಾಯಮ್ಮ, ವಸಂತ, ಪದ್ಮ, ವಿಶಾಲ, ಜಯಮ್ಮ, ಸವಿತಾ, ಚನ್ನಮ್ಮ, ಕಮಲಮ್ಮ, ಪುನೀತ್ ಕುಮಾರ್ ಇದ್ದರು.
ಮದ್ದೂರು ತಾಲೂಕು ಕದಲೀಪುರದಲ್ಲಿ ಕುಡಿಯುವ ನೀರಿಗೆ ತೊಂದರೆ ಅನುಭವಿಸುವಂತಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ನಂದೀಶ್‌ಗೌಡ, ತಾಯಮ್ಮ, ವಸಂತ, ಪದ್ಮ, ವಿಶಾಲ, ಜಯಮ್ಮ, ಸವಿತಾ, ಚನ್ನಮ್ಮ, ಕಮಲಮ್ಮ, ಪುನೀತ್ ಕುಮಾರ್ ಇದ್ದರು.
Published on

ಮದ್ದೂರು: ತಾಲೂಕಿನ ಕದಲೀಪುರದಲ್ಲಿ ಜಲಜೀವನ್ ಮಿಷನ್ ಕಾಮಗಾರಿ ಒಂದು ವರ್ಷವಾದರೂ ಪೂರ್ಣಗೊಳ್ಳದ ಕಾರಣ ಗ್ರಾಮಸ್ಥರು ಕುಡಿಯುವ ನೀರಿಗೆ ತೊಂದರೆ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ಗುತ್ತಿಗೆದಾರ ಹಾಗೂ ಇಂಜಿನಿಯರ್ ವಿರುದ್ಧ ಬುಧವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯ ನಂದೀಶ್ ಗೌಡ ಮಾತನಾಡಿ, ಕಳೆದ 2024ರ ಫೆಬ್ರವರಿ ತಿಂಗಳಿನಲ್ಲಿ ಜಲ ಜೀವನ್ ಮಿಷನ್ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ ಹೆಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕದಲೀಪುರ ಗ್ರಾಮದಲ್ಲಿ ಮಾತ್ರ ಕಾಮಗಾರಿಯು ಪ್ರಾರಂಭವಾಗಿ 1 ವರ್ಷದ ಮೇಲಾದರೂ ಕೂಡ ಕುಂಟುತ್ತಾ ಸಾಗಿದೆ. ಅಲ್ಲದೆ ಹಲವು ತಿಂಗಳಿನಿಂದ ಈ ಕಡೆ ಯಾರು ತಿರುಗಿಯೂ ನೋಡುತ್ತಿಲ್ಲ ಎಂದು ಆರೋಪಿಸಿದರು.

ಗ್ರಾಪಂ ವ್ಯಾಪ್ತಿಯಲ್ಲಿ ಕದಲೀಪುರ ಒಂದು ಸಣ್ಣ ಗ್ರಾಮವಾಗಿದ್ದು, ಸುಮಾರು 76 ಜೆಜೆಎಂ ಕುಡಿಯುವ ನೀರಿನ ಸಂಪರ್ಕ ಹೊಂದಿದ್ದು, ಇದಕ್ಕಾಗಿ 31.5 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. ಇದರಿಂದಾಗಿ ಗ್ರಾಮಸ್ಥರು ಕುಡಿಯುವ ನೀರಿಗೆ ಪ್ರಯಾಸಪಡುವಂತಾಗಿದ್ದು, ಗ್ರಾಮದಲ್ಲಿ ಗ್ರಾಪಂ ನಿಂದ ಈ ಹಿಂದೆ ಅಳವಡಿಸಿದ್ದ ಕೆಲವೊಂದು ನೀರಿನ ಕೊಳವೆಗಳಲ್ಲಿ ಮಾತ್ರ 3- 4 ದಿನಗಳಿಗೊಮ್ಮೆ ಬರುವ ಕುಡಿಯುವ ನೀರನ್ನು ಬೇರೆಯವರ ಬಳಿ ಹೋಗಿ ಕಾದು ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಗ್ರಾಮದ ಮಹಿಳೆಯರು ರೋಸಿ ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಈ ಬಗ್ಗೆ ಸಂಬಂಧಪಟ್ಟ ಎಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಎಷ್ಟೋ ಬಾರಿ ಮೊಬೈಲ್ ಕರೆ ಕರೆ ಮಾಡಿದರೂ ಕ್ಯಾರೆ ಅನ್ನುತ್ತಿಲ್ಲ ಎಂದ ಅವರು, ಹೀಗೆ ಆದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷ ನಂದೀಶ್ ಗೌಡ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಗ್ರಾಮಸ್ಥರಾದ ತಾಯಮ್ಮ, ವಸಂತಾ, ಪದ್ಮಾ, ವಿಶಾಲ, ಜಯಮ್ಮ, ಸವಿತಾ, ಚನ್ನಮ್ಮ, ಕಮಲಮ್ಮ, ಪುನೀತ್ ಕುಮಾರ್‌ಹ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net