

ಸರ್ಜಾಪುರ : ಆನೇಕಲ್ ತಾಲೂಕಿನ ಸರ್ಜಾಪುರ ಹೋಬಳಿಯಲ್ಲಿ ಫಲವತ್ತಾದ ಕೃಷಿಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕಾಗಿ ಸ್ವಾಧಿನಪಡಿಸಿಕೊಳ್ಳಲು ಮುಂದಾಗಿರುವ ಕೆಐಎಡಿಬಿ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಮುತ್ತನಲ್ಲೂರು ಬಸ್ ನಿಲ್ದಾಣದ ಬಳಿ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದಾರೆ. ಹೋರಾಟಕ್ಕೆ ಕರ್ನಾಟಕ ರಣಾ ವೇದಿಕೆಯ ಶಿವರಾಮೇಗೌಡ ಬಣದ ಹೋರಾಟಗಾರರು ಹಾಗೂ ಆನೇಕಲ್ ತಾಲೂಕು ವಿವಿಧ ರೈತ ಪರ ಹೋರಾಟಗಾರರು ಭೇಟಿ ನೀಡಿ ರೈತರಿಗೆ ಬೆಂಬಲ ಸೂಚಿಸಿದ್ದಾರೆ.
ಕರ್ನಾಟಕ ರಣಾ ವೇದಿಕೆ ಶಿವರಾಮಗೌಡ ಬಣದ ಉಪಾಧ್ಯ ಲೋಕೇಶ್ ಗೌಡ ಮಾತನಾಡಿ, ತಾಲೂಕಿನ ಬಹುತೇಕ ಭಾಗಗಳಲ್ಲಿ ಕೆಎಚ್ಬಿ ಹಾಗೂ ಕೆಐಎಡಿಬಿ ಸಂಸ್ಥೆಗಳು ಭೂಸ್ವಾಧಿನ ಮಾಡಿವೆ. ಹೀಗಾಗಿ ಕೈಗಾರಿಕಾ ವಿಕಸನದ ಹೆಸರಿನಲ್ಲಿ ಪರಿಸರ ಮಾಲಿನ್ಯ ಹೆಚ್ಚಾಗಿದೆ. ರೈತರ ಬದುಕು ಅತಂತ್ರವಾಗಿದೆ. ಈಗ ಸರ್ಜಾಪುರದ ಫಲವತ್ತಾದ ಕೃಷಿಭೂಮಿ ಮೇಲೂ ಕಣ್ಣು ಹಾಕಿರುವ ರಾಜ್ಯ ಸರ್ಕಾರ, ರೈತರ ಬದುಕು ನಾಶ ಮಾಡಲು ಪಣತೊಟ್ಟಂತಿದೆ. ಹಣ್ಣು, ತರಕಾರಿ ಮತ್ತು ಇತರೆ ಧಾನ್ಯಗಳು ನೇರವಾಗಿ ಬೆಂಗಳೂರಿನ ಜನರಿಗೆ ತಲುಪುತ್ತವೆ. ಇಂತಹ ಭೂಮಿಗಳನ್ನು ಕೈಗಾರಿಕೆಗೆ ಬಲಿ ನೀಡುವುದು ಎಂದರೆ ಆಹಾರ ಭದ್ರತೆಯ ಮೇಲೆಯೇ ಬೆಂಕಿ ಹಾಕಿದಂತೆ. ಭೂಸ್ವಾಧಿನ ಪ್ರಕ್ರಿಯೆ ತಣವೇ ಸ್ಥಗಿತಗೊಳಿಸದಿದ್ದರೆ ಆನೇಕಲ್ ತಾಲೂಕು ಬಂದ್ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಮುತ್ತನಲ್ಲೂರು ಗ್ರಾಪಂ ಮಾಜಿ ಅಧ್ಯ ಕೆ.ವಿಶ್ವನಾಥ್ ರೆಡ್ಡಿ ಮಾತನಾಡಿ, ರೈತರ ಶಾಂತಿಯುತ ಹಾಗೂ ನಿರಂತರ ಹೋರಾಟಕ್ಕೆ ಕರ್ನಾಟಕ ರಣಾ ವೇದಿಕೆ ಬೆಂಬಲ ನೀಡಿದ್ದು, ಆನೆ ಬಲ ಬಂದಂತಾಗಿದೆ. ಸರ್ಕಾರ ರ್ನಿಲ್ಯ ಮಾಡಿದರೆ ಹಿನ್ನಡೆಯಿಲ್ಲದ ಹೋರಾಟ ನಡೆಯುವುದು ಖಚಿತ ಎಂದರು.
ಸರ್ಜಾಪುರ ಭೂಸ್ವಾಧಿನ ವಿರೋಧಿ ಹೋರಾಟ ಸಮಿತಿಯ 21ನೇ ದಿನ ಪೂರೈಸಿದ್ದು, ಪ್ರತಿದಿನ ಗ್ರಾಮಸ್ಥರು, ರೈತರು, ಮಹಿಳೆಯರು, ಯುವಕರು ಸೇರಿ ಹಲವರು ಧರಣಿಯಲ್ಲಿ ಭಾಗವಹಿಸುತ್ತಿದ್ದು, ಹೋರಾಟಕ್ಕೆ ಭಾರಿ ಜನ ಬೆಂಬಲ ವ್ಯಕ್ತವಾಗುತ್ತಿದೆ. ಹೀಗಾಗಿ, ಸರ್ಜಾಪುರದ ಭೂಸ್ವಾಧಿನ ಹೋರಾಟ ಇದೀಗ ರಾಜ್ಯಮಟ್ಟದ ಚರ್ಚೆಯ ವಿಷಯವಾಗಿದೆ ಎಂದರು. ಹೋರಾಟಗಾರರಾದ ಆರ್.ಕೇಶವ್, ಕೃಷ್ಣ ರೆಡ್ಡಿ, ಮಾಜಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಪುಷ್ಪಾ ವಿಎಸ್.ರೆಡ್ಡಿ, ರೈತ ಮುಖಂಡರಾದ ಅಂಬರೀಶ್ ರೆಡ್ಡಿ, ಗುರುಮೂರ್ತಿ ರೆಡ್ಡಿ, ಅಣ್ಣಯ್ಯ, ನಾಗೇಶ್, ಹರೀಶ್, ಮಧುಸೂಧನ್ ರೆಡ್ಡಿ, ಕೆ.ನರೇಂದ್ರ, ಲೋಕೇಶ್.ಕೆ, ವೆಂಕಟಸ್ವಾಮಿ ರೆಡ್ಡಿ, ರಾಜೇಶ್ ಇತರರು ಇದ್ದರು.
ಜು.18ರಂದು ಫ್ರೀಡಂ ಪಾರ್ಕ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಕೆಐಎಡಿಬಿಯ ಭೂಸ್ವಾಧಿನ ವಿಶೇಷ ಉಪಯುಕ್ತ ಎಎನ್.ರುನಂದನ್ ಅವರು ನಮ್ಮ ಅಹವಾಲು ಸ್ವೀಕರಿಸಿ ಜು.25ರಂದು ಅಧಿಕಾರಿಗಳು ರೈತರೊಡನೆ ಸಭೆ ನಡೆಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಮಾತು ನೀಡಿ ಐದು ದಿನಗಳು ಕಳೆದರೂ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಶೋಚನೀಯ. > ಡಾ.ಚಿನ್ನಪ್ಪ ವೈ ಚಿಕ್ಕಹಾಗಡೆ ಕರ್ನಾಟಕ ಜೈ ಭೀಮ್ ಜನಜಾಗೃತಿ ಸಂಟನೆ ಅಧ್ಯಕ್ಷ ತಾಲೂಕಿನಲ್ಲಿ ಸಾಕಷ್ಟು ಕೃಷಿಭೂಮಿ ಕಳೆದುಕೊಂಡಿದ್ದೇವೆ. ಇನ್ನುಳಿದಿರುವ ಅಲ್ಪ ಪ್ರಮಾಣದ ಭೂಮಿ ನುಂಗಲು ಸರ್ಕಾರ ಮುಂದಾಗುತ್ತಿದೆ. ಇದು ರೈತರ ಜೀವನ ಶೈಲಿ, ಗ್ರಾಮದ ಆರ್ಥಿಕತೆಗೆ ಹಾಗೂ ಪರಿಸರ ಸಮತೋಲನಕ್ಕೆ ಧಕ್ಕೆ ತಂದಂತಾಗಿದೆ. > ರಾಜೇಶ್ ಜನಪದ ಗಾಯಕ ಆನೇಕಲ್